ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರಿಗೆ ಪಾಕಿಸ್ಥಾನ ಮೂಲದ ರಾಖಿ ಸಹೋದರಿಯೊಬ್ಬರು ಇದ್ದಾರೆ. ಕಳೆದ 20 ವರ್ಷಗಳಿಂದ ಇವರು ಮೋದಿಗೆ ರಕ್ಷಾಬಂಧನ ಕಟ್ಟುತ್ತಿದ್ದಾರೆ.
ಖಮರ್ ಮೊಹ್ಸೀನ್ ಶೇಖ್ ಪಾಕಿಸ್ಥಾನದವರಾಗಿದ್ದು, ವಿವಾಹದ ಬಳಿಕ ಭಾರತಕ್ಕೆ ಆಗಮಿಸಿದ್ದರು ಕಳೆದ 22-23 ವರ್ಷಗಳಿಂದ ಮೋದಿಯವರಿಗೆ ನಾನು ರಾಖಿ ಕಟ್ಟುತ್ತಿದ್ದೇನೆ. ಈ ಬಾರಿಯೂ ರಾಖಿ ಕಟ್ಟಲು ಉತ್ಸುಹುಕಳಾಗಿದ್ದೇನೆ ಎಂದು ಖಮರ್ ಹೇಳಿಕೊಂಡಿದ್ದಾರೆ.
ಅಷ್ಟೇ ಅಲ್ಲದೇ 2 ದಿನಗಳ ಹಿಂದೆ ಮೋದಿ ತನಗೆ ದೂರವಾಣಿ ಕರೆ ಮಾಡಿದ್ದಾರೆ ಎಂದೂ ಇವರು ಹೇಳಿದ್ದಾರೆ.
ತಾನು ಮೊದಲ ಬಾರಿಗೆ ರಾಖಿ ಕಟ್ಟಿದಾಗ ಮೋದಿ ಆರ್ಎಸ್ಎಸ್ ಕಾರ್ಯಕರ್ತನಾಗಿ ಸೇವೆ ಸಲ್ಲಿಸುತ್ತಿದ್ದರು ಎಂಬುದನ್ನು ಖಮರ್ ನೆನಪಿಸಿಕೊಂಡಿದ್ದಾರೆ.
ಪ್ರಧಾನಿಯಾಗಿರುವ ಮೋದಿ ಈ ಬಾರಿ ಬ್ಯೂಸಿಯಾಗಿರಬಹುದು ಎಂದುಕೊಂಡಿದ್ದೆ. ಆದರೆ ಅವರು ಕರೆ ಮಾಡಿದಾಗ ನಿಜಕ್ಕೂ ಸಂತೋಷವಾಯಿತು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.