ಮೊರದಾಬಾದ್ : ಉತ್ತರ ಪ್ರದೇಶದ ಮೊರದಾಬಾದ್ನ ವಿದ್ಯಾರ್ಥಿಗಳು 100 ಅಡಿ ಉದ್ದದ ರಾಖಿಯನ್ನು ತಯಾರಿಸಿ ಅದನ್ನು ಭಾರತೀಯ ಸೈನಿಕರಿಗೆ ಕಳುಹಿಸಿದ್ದಾರೆ.
ಈ ರಾಖಿಯ ಮೂಲಕ ಪ್ರತಿ ರಾಜ್ಯದ ಸಂಸ್ಕೃತಿ ಮತ್ತು ಪ್ರತಿ ಧರ್ಮದ ಐಕ್ಯತೆಯನ್ನು ವಿದ್ಯಾರ್ಥಿಗಳು ವರ್ಣಿಸಿದ್ದಾರೆ.
ವರ್ಣರಂಜಿತ ಪೇಪರ್, ಬಟ್ಟೆ, ಲೇಸ್ ಮತ್ತು ಡೆಕೊರೇಟೀವ್ ವಸ್ತುಗಳನ್ನು ಬಳಸಿ 100 ಅಡಿ ಉದ್ದದ ರಾಖಿಯನ್ನು ತಯಾರಿಸಿದ್ದಾರೆ. ಈ ರಾಖಿಯು ದೇಶದಲ್ಲಿ ಶಾಂತಿ ಮತ್ತು ಸಾಮರಸ್ಯವಿದೆ ಎಂಬುದನ್ನು ಸೂಚಿಸುವಂತಿದೆ.
ಇತ್ತೀಚೆಗೆ ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿಯಾದ ಹಿನ್ನೆಲೆಯಲ್ಲಿ ನಮ್ಮ ಸೈನಿಕರಿಗೆ ಏನನ್ನಾದರೂ ಮಾಡಬೇಕು ಎಂದು ಎಲ್ಲಾ ವಿದ್ಯಾರ್ಥಿಗಳು ಯೋಚಿಸಿ ವಿಶಿಷ್ಟ ರಾಖಿಯನ್ನು ತಯಾರಿಸುವ ಮೂಲಕ ಭಾರತೀಯ ಸೈನಿಕರ ಮೇಲಿನ ಪ್ರೀತಿ ಮತ್ತು ಗೌರವವನ್ನು ತೋರಿದ್ದಾರೆ.
ಈ 100 ಅಡಿ ಉದ್ದದ ರಾಖಿಯನ್ನು ವಿದ್ಯಾರ್ಥಿಗಳು ಗಡಿ ಭಾಗದಲ್ಲಿರುವ ಭಾರತೀಯ ಸೈನಿಕರಿಗೆ ಕಳುಹಿಸಿಕೊಟ್ಟಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.