×
Home About Us Advertise With s Contact Us

ಹಿಮಾಲಯ ಯಾತ್ರೆಗೆ ಸಜ್ಜಾದ ಐಎಎಸ್ ಅಧಿಕಾರಿಗಳ ತಂಡ

IASನವದೆಹಲಿ: ಮೌಂಟ್ ಎವರೆಸ್ಟ್ ಪರ್ವತವನ್ನು ಹತ್ತಲು ಸಜ್ಜಾಗಿರುವ ಐದು ಮಂದಿ ಅಖಿಲ ಭಾರತ ಸೇವಾ ಅಧಿಕಾರಿಗಳ ತಂಡ ಶುಕ್ರವಾರ ಪ್ರಧಾನಿಯನ್ನು ಭೇಟಿಯಾಯಿತು. ಹಿಮಾಲಯವನ್ನೇರುತ್ತಿರುವ ಮೊದಲ ಸೇವಾ ಅಧಿಕಾರಿಗಳ ತಂಡ ಇದಾಗಿದೆ.

ಐಎಎಸ್ ಅಧಿಕಾರಿ ರವೀಂದ್ರ ಕುಮಾರ್ ಅವರ ನೇತೃತ್ವದ ಈ ತಂಡದಲ್ಲಿ ಐಪಿಎಸ್ ಅಧಿಕಾರಿ ಸರೋಜ್ ಕುಮಾರಿ, ಐಎಫ್‌ಎಸ್ ಅಧಿಕಾರಿ ಎಸ್.ಪ್ರಭಾಕರನ್, ಐಎಎಸ್ ಅಧಿಕಾರಿ ವಿಕ್ರಮ್ ಜಿಂದಲ್,  ಐಪಿಎಸ್ ಅಧಿಕಾರಿ ಸುಶೀಲ್ ಶರ್ಮಾ ಇದ್ದಾರೆ. ಸ್ವಚ್ಛ ಭಾರತ ಅಭಿಯಾನದ ಬ್ಯಾನರ್ ಹಿಡಿದುಕೊಂಡು ಇವರು ಹಿಮಾಲಯವನ್ನು ಏರಲಿದ್ದಾರೆ.

2015ಕ್ಕೆ ಹಿಮಾಲಯ ಏರಿದ ಭಾರತದ ಸಾಧನೆಗೆ ಸ್ವರ್ಣ ಮಹೋತ್ಸವ. 1965ರಲ್ಲಿ ಮೊತ್ತ ಮೊದಲ ಬಾರಿಗೆ ಭಾರತ ಹಿಮಾಲಯ ಏರಿತ್ತು. ಇದರ ಸ್ಮರಣಾರ್ಥ ಈ ಅಧಿಕಾರಿಗಳ ತಂಡ ಹಿಮಾಲಯ ಯಾತ್ರೆ ಕೈಗೊಂಡಿದೆ.

ಈ ಅಧಿಕಾರಿಗಳ ತಂಡಕ್ಕೆ ಮೋದಿ ಆಲ್ ದಿ ಬೆಸ್ಟ್ ಹೇಳಿದ್ದಾರೆ.

Leave a Reply

Your email address will not be published. Required fields are marked *

 

 

 

 

 

 

 

 

 

Recent News

Back To Top