ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರನ್ನು ತನ್ನ ತಂದೆ ಸಮಾನರು, ಮರ್ಗದರ್ಶನವಿತ್ತ ಗುರು ಎಂದು ಬಣ್ಣಿಸಿದ್ದರು. ಅಧಿಕಾರದ ಕೊನೆಯ ವೇಳೆಯಲ್ಲಿ ಮೋದಿ ನನಗೆ ಬರೆದ ಪತ್ರ ಹೃದಯವನ್ನು ತಟ್ಟಿದು ಎಂದು ಪ್ರಣವ್ ಹೇಳಿಕೊಂಡಿದ್ದಾರೆ. ಮಾತ್ರವಲ್ಲ ಟ್ವಿಟರ್ನಲ್ಲೂ ಹಂಚಿಕೊಂಡಿದ್ದಾರೆ.
On my last day in office as the President, I received a letter from PM @narendramodi that touched my heart! Sharing with you all. pic.twitter.com/cAuFnWkbYn
— Pranab Mukherjee (@CitiznMukherjee) August 3, 2017
ವಿಭಿನ್ನ ರಾಜಕೀಯ ಸಿದ್ಧಾಂತಗಳಿಂದ ಬಂದರೂ ತಮ್ಮ ನಡುವೆ ಬಾಂಧವ್ಯ ಬೆಳೆದ ರೀತಿಯನ್ನು ಪತ್ರದಲ್ಲಿ ಮೋದಿ ಬಣ್ಣಿಸಿದ್ದಾರೆ.
ಪ್ರಣವ್ ಅವರ ಬೌದ್ಧಿಕ ಕೌಶಲ್ಯ, ಕೆಲವೊಂದು ವಿಷಯಗಳ ಬಗ್ಗೆ ಅವರಿಗಿದ್ದ ಆಳವಾದ ಜ್ಞಾನ ತನಗೆ ಮತ್ತು ತನ್ನ ಸರ್ಕಾರಕ್ಕೆ ಸಾಕಷ್ಟು ಸಹಾಯ ಮಾಡಿದೆ ಎಂಬುದನ್ನು ಮೋದಿ ಉಲ್ಲೇಖಿಸಿದ್ದಾರೆ.
‘ನೀವು ಸ್ವಾರ್ಥವಿಲ್ಲದೆ ರಾಜಕಾರಣ ಮಾಡುತ್ತಿದ್ದ ಪೀಳಿಗೆಗೆ ಸೇರಿದವರು. ನೀವು ದೇಶಕ್ಕೆ ಪ್ರೇರಣಾದಾಯಕರು. ರಾಷ್ಟ್ರಪತಿಯಾದರೂ ವಿನಂಬ್ರ ಸೇವಕನಾಗಿ, ನಾಯಕನಾಗಿ ನಮಗೆ ಮಾರ್ಗದರ್ಶನ ನೀಡಿದಿರಿ. ನಿಮ್ಮ ಬಗ್ಗೆ ದೇಶಕ್ಕೆ ಹೆಮ್ಮೆ ಇದೆ’ ಇದೆ ಎಂದು ಮೋದಿ ಪತ್ರದಲ್ಲಿ ಹೇಳಿದ್ದಾರೆ.
ಮೋದಿಯ ಈ ಪತ್ರ ನನ್ನ ಮನ ಮುಟ್ಟಿತು ಎಂದು ಪ್ರಣವ್ ಹೇಳಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.