ನವದೆಹಲಿ: ಭಾರತದ ವಿವಿಧ ಶಸ್ತ್ರಾಸ್ತ್ರ ಪಡೆಗಳಿಗೆ ಜಮ್ಮು ಕಾಶ್ಮೀರದ ಸುಮಾರು 16 ಸಾವಿರ ಸ್ಥಳಿಯರನ್ನು ನೇಮಕ ಮಾಡಲು ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಿದೆ. ಈ ಮೂಲಕ ಅಲ್ಲಿನ ಜನರ ಮನ ಗೆಲ್ಲುವ ಮತ್ತು ಅವರಿಗೆ ಉದ್ಯೋಗವಕಾಶ ಒದಗಿಸುವ ಕಾರ್ಯ ಮಾಡುತ್ತಿದೆ.
ರಾಜ್ಯಸಭೆಗೆ ಈ ಬಗ್ಗೆ ಲಿಖಿತ ಉತ್ತರ ನೀಡಿರುವ ಗೃಹ ಖಾತೆ ರಾಜ್ಯ ಸಚಿವ ಹಂಸರಾಜ್ ಅಹಿರ್, ‘ಜಮ್ಮು ಕಾಶ್ಮೀರದ ಜನತೆಯನ್ನು ಮುಖ್ಯವಾಹಿನಿಗೆ ತರುವ ಸಲುವಾಗಿ ಪೊಲೀಸರು ಕ್ರೀಡೆ, ಕಮ್ಯೂನಿಟಿ ಪೊಲೀಸಿಂಗ್, ದುಷ್ಕರ್ಮಿಗಳ ಕೌನ್ಸೆಲಿಂಗ್ನಂತಹ ಕಾರ್ಯ ಮಾಡುತ್ತಿದ್ದಾರೆ’ ಎಂದರು.
ಅಲ್ಲಿನ ಯುವಕರಿಗೆ ಉದ್ಯೋಗವನ್ನು ದೊರಕಿಸಿ ಕೊಡುವ ಸಲುವಾಗಿ ಸುಮಾರು 10 ಸಾವಿರ ಎಸ್ಪಿಓ ಹುದ್ದೆಗಳಿಗೆ, ಭಾರತದ 5 ಹೊಸ ರಿಸರ್ವ್ ಬೆಟಾಲಿಯನ್ಗಳ 5381 ಹುದ್ದೆಗಳಿಗೆ, 1079 ಸಿಆರ್ಪಿಎಫ್ ಮತ್ತು ಅಸ್ಸಾಂ ರೈಫಲ್ ವಿಭಾಗಗಳಲ್ಲಿ ಅವರನ್ನು ನಿಯೋಜಿಸಲು ಉದ್ದೇಶಿಸಲಾಗಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.