ಅಮರಾವತಿ: ವಿಜಯನಗರಂ ಆಂಧ್ರಪ್ರದೇಶದ ಅತೀ ಹಿಂದುಳಿದ ಜಿಲ್ಲೆ. ಆದರೆ ಸ್ವಚ್ಛ ಭಾರತದ ವಿಷಯದಲ್ಲಿ ಈ ಜಿಲ್ಲೆ ಸಾಕಷ್ಟು ಪ್ರಗತಿಯನ್ನು ಕಾಣುತ್ತಿದೆ.
ಇಲ್ಲಿನ ಜಿಲ್ಲಾಡಳಿತ ಸುಮಾರು 10 ಸಾವಿರ ಶೌಚಾಲಯಗಳನ್ನು ಕೇವಲ 100 ಗಂಟೆಗಳಲ್ಲಿ ಅಂದರೆ ಮಾರ್ಚ್ 10ರಿಂದ 14ರೊಳಗೆ ನಿರ್ಮಿಸಲಾಗಿದೆ. ಗ್ರಾಮಸ್ಥರು, ಸ್ಥಳಿಯ ನಾಯಕರು ಮತ್ತು ಎನ್ಜಿಓಗಳ ಪ್ರತಿನಿಧಿಗಳ ಸಹಕಾರದಿಂದ ಇದನ್ನು ನಿರ್ಮಿಸಲಾಗಿದೆ.
ಈಗಾಗಲೇ ಇಲ್ಲಿನ 71 ಗ್ರಾಮ ಪಂಚಾಯತ್ಗಳನ್ನು ಬಯಲು ಶೌಚಾಲಯ ಮುಕ್ತವೆಂದು ಘೋಷಿಸಲಾಗಿದೆ.
ಇದೀಗ ಈ ಜಿಲ್ಲೆಯ ಸಾಧನೆ ಪ್ರಧಾನಿ ನರೇಂದ್ರ ಮೋದಿಯವರ ಗಮನವನ್ನು ಸೆಳೆದಿದ್ದು, ಮನ್ ಕೀ ಬಾತ್ ಕಾರ್ಯಕ್ರಮದ ವೇಳೆ ಇದನ್ನು ಪ್ರಸ್ತಾಪಿಸಿದ್ದಾರೆ.
ಇದೀಗ ಈ ಜಿಲ್ಲೆ ಆಗಸ್ಟ್ 15ರೊಳಗೆ 50 ಸಾವಿರ ಮನೆಗಳಿಗೆ ಶೌಚಾಲಯ ನಿರ್ಮಿಸಲು ಮತ್ತು ಮುಂದಿನ ಅ.2ರೊಳಗೆ ಮತ್ತೆ 50 ಸಾವಿರ ಶೌಚಾಲಯ ನಿರ್ಮಾಣಕ್ಕೆ ಸಜ್ಜಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.