ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟೆಯಲ್ಲಿ ಮಾಡಬೇಕಾದ ಭಾಷಣಕ್ಕೆ ಜನರಿಂದ ಸಲಹೆ ಸೂಚನೆಗಳನ್ನು ಕೇಳಿದ್ದಾರೆ.
ಆಗಸ್ಟ್ 15ರಂದು ಕೆಂಪುಕೋಟೆಯಲ್ಲಿ ನಿಂತು ದೇಶವನ್ನು ಉದ್ದೇಶಿಸಿ ಭಾಷಣ ಮಾಡುವ ಅವಕಾಶ ನನಗೆ ಸಿಗುತ್ತದೆ. ನಾನು ಒಂದು ಮಾಧ್ಯಮವಷ್ಟೇ. ಅದು ವ್ಯಕ್ತಿಯೊಬ್ಬ ಮಾಡುವ ಭಾಷಣವಲ್ಲ. 125 ಕೋಟಿ ಜನರ ಧ್ವನಿಯ ಪ್ರತಿಧ್ವನಿ’ ಎಂದು ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮೋದಿ ಹೇಳಿದ್ದಾರೆ.
ತಮ್ಮ ವೆಬ್ಸೈಟ್ mygov.in ಅಥವಾ ನರೇಂದ್ರ ಮೋದಿ ಆ್ಯಪ್ ಮೂಲಕವೂ ಸಲಹೆಗಳನ್ನು ಕಳುಹಿಸಿಕೊಡಬಹುದು ಎಂದಿದ್ದಾರೆ.
ಕೆಂಪು ಕೋಟೆಯಲ್ಲಿ ನಿಂತು ಆಗಸ್ಟ್ 15ರಂದು ನಾನು ಏನು ಮಾತನಾಡಬೇಕು ಮತ್ತು ಯಾವ ವಿಷಯಗಳನ್ನು ಪ್ರಸ್ತಾಪಿಸಬೇಕು ಎಂಬ ಬಗ್ಗೆ ಸಲಹೆ ಕೊಡುವಂತೆ ಮೋದಿ ಮನವಿ ಮಾಡಿಕೊಂಡಿದ್ದಾರೆ.