ನವದೆಹಲಿ: ಸರ್ಫೇಸ್ ಟು ಏರ್ ಮಿಸೈಲ್ ಆಕಾಶ್ನಲ್ಲಿ ಶೇ.30ರಷ್ಟು ವೈಫಲ್ಯದ ಮಟ್ಟ ಕಂಡು ಬಂದಿದೆ ಎಂದು ನ್ಯಾಷನಲ್ ಆಡಿಟರ್ ಸಿಎಜಿ ಹೇಳಿದೆ. ಇಂತಹ ವೈಫಲ್ಯಗಳು ಕಾರ್ಯಾಚರಣೆಗೆ ಅಪಾಯ ತಂದೊಡ್ಡಬಹುದು ಎಂಬ ಎಚ್ಚರಿಕೆ ನೀಡಿದೆ.
ಈ ಬಗ್ಗೆ ಲೋಕಸಭೆಗೆ ವರದಿ ನೀಡಿರುವ ಸಿಎಜಿ, ಸರ್ಕಾರಿ ಸ್ವಾಮ್ಯದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ನಿಂದ ಪಡೆದ ಸ್ಟ್ರೇಟಜಿಕ್ ಮಿಸೈಲ್ ಸಿಸ್ಟಮ್ ಗುಣಮಟ್ಟದ ವೈಫಲ್ಯತೆಯನ್ನು ಹೊಂದಿದೆ ಎಂದಿದೆ.
ಪ್ರಸ್ತುತ ಆಕಾಶ್ ಮಿಸೈಲ್ಗಳನ್ನು ಚೀನಾದ ಗಡಿಯಲ್ಲಿ ನಿಯೋಜನೆಗೊಳಿಸಲು ನಿರ್ಧರಿಸಲಾಗಿದೆ.
2014ರವರೆಗೆ 80 ಆಕಾಶ್ ಮಿಸೈಲ್ಗಳನ್ನು ಪಡೆಯಲಾಗಿದೆ. ಇವುಗಳನ್ನು 2014ರ ಎಪ್ರಿಲ್-ನವೆಂಬರ್ ನಡುವೆ ಪರೀಕ್ಷೆ ನಡೆಸಲಾಗಿತ್ತು. ಇದರಲ್ಲಿನ 6 ಮಿಸೈಲ್ಗಳು ಪರೀಕ್ಷೆಯಲ್ಲಿ ವಿಫಲವಾಗಿದ್ದವು ಎಂದು ಸಿಎಜಿ ವರದಿ ಹೇಳಿದೆ.
ಸಂಸ್ಥೆ ನಡೆಸಿದ ಉಳಿದ ಮಿಸೈಲ್ಗಳ ಪರೀಕ್ಷೆಯ ವಾಸ್ತವತೆಯನ್ನೂ ದೃಢಪಡಿಸಿಕೊಳ್ಳುವ ಅಗತ್ಯವಿದೆ ಎಂದು ಅದು ಪ್ರತಿಪಾದಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.