ನವದೆಹಲಿ: ತಂದೆಯ ಬದಲು ತಾಯಿಯೇ ಮಗುವಿನ ನೈಸರ್ಗಿಕ ಪೋಷಕಿಯಾಗಬೇಕು ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಶಿಫಾರಸ್ಸುನಮಾಡಿದೆ.
ಅನಿವಾಸಿ ಭಾರತೀಯನನ್ನು ವಿವಾಹವಾದ ಮಹಿಳೆಯ ಕುರಿತಾದ ವಿಷಯಗಳ ಬಗ್ಗೆ ಪರಿಶೀಲಿಸಲು ವಿದೇಶಾಂಗ ಸಚಿವಾಲಯ ಸ್ಥಾಪಿಸಿದ ತಜ್ಞರ ಸಮಿತಿಯ ಮುಂದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯವು ತಾಯಿಯೇ ಮಕ್ಕಳ ಪೋಷಕಿಯಾಗಬೇಕು ಎಂಬ ಸಲಹೆಯನ್ನು ಮುಂದಿಟ್ಟಿದೆ.
‘ತಂದೆ ನೈಸರ್ಗಿಕ ಪೋಷಕನಾದರೆ ವಿಚ್ಛೇದನದಂತಹ ಪ್ರಕರಣಗಳಲ್ಲಿ ತಾಯಿ ಮಕ್ಕಳ ಕಸ್ಟಡಿಗಾಗಿ ಕೋರ್ಟ್ ಮೊರೆ ಹೋಗಬೇಕಾಗುತ್ತದೆ. ತಂದೆಗೆ ಹೆಚ್ಚಿನ ಆದಾಯವಿರುತ್ತದೆ ಎಂಬ ಕಾರಣಕ್ಕೆ ಮಕ್ಕಳ ಹಿತಾಸಕ್ತಿ ಪರಿಗಣಿಸಿ ತಂದೆಗೆ ಕೋರ್ಟ್ ಮಕ್ಕಳ ಕಸ್ಟಡಿ ನೀಡುತ್ತದೆ. ಹೀಗಾಗೀ ತಾಯಿಯನ್ನು ನೈಸರ್ಗಿಕ ಪೋಷಕಿಯಾಗಿ ತಂದೆ ಕಸ್ಟಡಿಗಾಗಿ ಕೋರ್ಟ್ಗೆ ಹೋಗಲಿ’ ಎಂದು ಹೇಳಲಾಗಿದೆ ಎಂದು ವರದಿಗಳು ತಿಳಿಸಿವೆ.
ಅಲ್ಲದೇ ಮಕ್ಕಳ ಹಿತಾಸಕ್ತಿಯನ್ನು ಪರಿಗಣಿಸಿ ಸಚಿವೆ ಮೇನಕಾ ಗಾಂಧೀ ಅವರು ಮಕ್ಕಳ ಜಾಯಿಂಟ್ ಕಸ್ಟಡಿಯ ಪ್ರಸ್ತಾವಣೆಯನ್ನು ಪರಿಶೀಲಿಸುತ್ತಿದ್ದಾರೆ ಎನ್ನಲಾಗಿದೆ.
ಹೆಚ್ಚಿನ ಕಡೆ ತಂದೆಯೇ ಮಕ್ಕಳ ನೈಸರ್ಗಿಕ ಪೋಷಕನಾಗಿದ್ದು, ಧಾರ್ಮಿಕ ಕಾನೂನುಗಳು ಕೂಡ ಇದನ್ನೇ ಪ್ರತಿಪಾದಿಸುತ್ತದೆ. ಇದರ ಬದಲಾವಣೆಗೆ ಮೇನಕಾ ಗಾಂಧಿ ಶಿಫಾರಸ್ಸು ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.