ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ ಶುಕ್ರವಾರ ಹೊಸ ವೇತನ ನೀತಿ ಮಸೂದೆಗೆ ಅನುಮೋದನೆಯನ್ನು ನೀಡಿದ್ದು, ದೇಶದಾದ್ಯಂತದ 4 ಕೋಟಿ ನೌಕರರು ಇದರ ಪ್ರಯೋಜನ ಪಡೆದುಕೊಳ್ಳಲಿದ್ದಾರೆ.
ಕಾರ್ಮಿಕರಿಗೆ ಸಂಬಂಧಿಸಿದ ನಾಲ್ಕು ಮಸೂದೆಗಳನ್ನು ಏಕೀಕೃತಗೊಳಿಸಿ ಎಲ್ಲಾ ವಲಯಗಳಲ್ಲೂ ಕನಿಷ್ಠ ವೇತನ ನಿಯಮವನ್ನು ಈ ಹೊಸ ವೇತನ ನೀತಿ ಮಸೂದೆ ಜಾರಿಗೊಳಿಸಲಿದೆ.
ಪ್ರಧಾನಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಮಸೂದೆಯ ಕರಡು ಪ್ರತಿಗೆ ಅನುಮೋದನೆಯನ್ನು ನೀಡಲಾಗಿದೆ. ಈ ಮಸೂದೆ ಕನಿಷ್ಠ ವೇತನ ಕಾಯ್ದೆ 1948, ವೇತನ ಪಾವತಿ ಕಾಯ್ದೆ 1936, ಬೋನಸ್ ಪಾವತಿ ಕಾಯ್ದೆ 1965 ಮತ್ತು ಸಮಾನ ವೇತನಾ ಕಾಯ್ದೆ 1976ನ್ನು ಏಕೀಕೃತಗೊಳಿಸಲಿದೆ.
ಈ ಕಾಯ್ದೆಯಡಿ ಕೇಂದ್ರ ದೇಶದಾದ್ಯಂತ ಎಲ್ಲಾ ವಲಯದಲ್ಲೂ ನೌಕರರಿಗೆ ಕನಿಷ್ಠ ವೇತನವನ್ನು ನಿಗದಿಪಡಿಸಲಿದೆ. ರಾಜ್ಯಗಳು ಇದಕ್ಕೆ ಬದ್ಧವಾಗಿರಬೇಕು. ಅಲ್ಲದೇ ಹೆಚ್ಚಿನ ವೇತನವನ್ನೂ ನೀಡಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.