ನವದೆಹಲಿ: 2016ರಲ್ಲಿ ಭಾರತಕ್ಕೆ ಚಿಕಿತ್ಸೆಗಾಗಿ ಒಟ್ಟು 3,61,060 ವಿದೇಶಿ ರೋಗಿಗಳು ಬಂದಿದ್ದಾರೆ ಎಂದು ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಮಹೇಶ್ ಶರ್ಮಾ ತಿಳಿಸಿದ್ದಾರೆ.
ರಾಜ್ಯಸಭಾಗೆ ಲಿಖಿತ ಉತ್ತರ ನೀಡಿದ ಅವರು, ‘2014ರಲ್ಲಿ ಭಾರತಕ್ಕೆ 1,84,298 ವಿದೇಶಿ ರೋಗಿಗಳು ಆಗಮಿಸಿದ್ದರು, 2015ರಲ್ಲಿ 3,61,918 ವಿದೇಶಿ ರೋಗಿಗಳು ಆಗಮಿಸಿದ್ದರು, 2016ರಲ್ಲಿ 3,61,060 ರೋಗಿಗಳು ಆಗಮಿಸಿದ್ದಾರೆ’ ಎಂದಿದ್ದಾರೆ.
ಪ್ರವಾಸೋದ್ಯಮ ಸಚಿವಾಲಯವು ಮೆಡಿಕಲ್ ಮತ್ತು ವೆಲ್ನೆಸ್ ಟೂರಿಸಂನ್ನು ಪ್ರಚುರಪಡಿಸುವುದಕ್ಕೆ ನಿರ್ದೇಶನಗಳನ್ನು ರೂಪಿಸಿದೆ.
ನಿರ್ದೇಶನದ ಪ್ರಕಾರ ಮಾನ್ಯತೆ ಪಡೆದಿರುವ ಮೆಡಿಕಲ್ ಮತ್ತು ವೆಲ್ನೆಸ್ ಟೂರಿಸಂ ಸರ್ವಿಸ್ ಪ್ರೊವೈಡರ್, ಚೇಂಬರ್ ಆಫ್ ಕಾಮರ್ಸ್, ಮಾರ್ಕೆಟಿಂಗ್ ಡೆವಲಪ್ಮೆಂಟ್ ಅಸಿಸ್ಟೆಂಟ್ ಆಗಿರುವ ಇತರ ಸಂಸ್ಥೆಗಳು ಸಚಿವಾಲಯದಿಂದ ಆರ್ಥಿಕ ನೆರವು ಪಡೆಯುತ್ತದೆ.
ಮೆಡಿಕಲ್ ಮತ್ತು ವೆಲ್ನೆಸ್ ಟೂರಿಸಂ ಸೇರಿದಂತೆ ಟೂರಿಸಂ ಪ್ರೊಡಕ್ಟ್ನ್ನು ಖಾಸಗಿ ವಲಯಗಳೇ ಹೆಚ್ಚಾಗಿ ನೀಡುತ್ತಿದ್ದು, ಮಾರುಕಟ್ಟೆಗೆ ಅನುಗುಣವಾಗಿ ಸೇವೆಯ ದರ ನಿಗದಿಯಾಗುತ್ತದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.