ನವದೆಹಲಿ: ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು 2017ರ ಅತ್ಯುತ್ತಮ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಹೆಸರಿಸಿದೆ. ‘ಇಂಡಿಯಾ ರ್ಯಾಕಿಂಗ್ ರಿಪೋರ್ಟ್ 2017’ ಶೀರ್ಷಿಕೆಯಡಿ ಪಟ್ಟಿಯನ್ನು ಮಾಡಲಾಗಿದೆ. ಮ್ಯಾನೇಜ್ಮೆಂಟ್, ವಿಶ್ವವಿದ್ಯಾಲಯ, ಎಂಜಿನಿಯರಿಂಗ್, ಮೆಡಿಕಲ್ ಹೀಗೆ ವಿವಿಧ ಕೆಟಗರಿಯಲ್ಲಿ ಈ ಪಟ್ಟಿ ಇದೆ.
ದೇಶದ ನಂ.1 ಎಂಜಿನಿಯರಿಂಗ್ ಇನ್ಸ್ಟಿಟ್ಯೂಟ್ ಆಗಿ ಐಐಟಿ ಮದ್ರಾಸ್ ಪಟ್ಟಿಯಲ್ಲಿ ಸ್ಥಾನಪಡೆದುಕೊಂಡಿದೆ. ಐಐಟಿ ಬಾಂಬೆ 2ನೇ ಸ್ಥಾನ ಪಡೆದುಕೊಂಡಿದೆ. ಐಐಟಿ ಖರಗ್ಪುರ 3ನೇ, ಐಐಟಿ ದೆಹಲಿ 4ನೇ, ಐಐಟಿ ಖಾನ್ಪುರ 5ನೇ, ಐಐಟಿ ರೂಕ್ರಿ 6ನೇ, ಐಐಟಿ ಗುವಾಹಟಿ 7ನೇ ಸ್ಥಾನ ಪಡೆದುಕೊಂಡಿದೆ. ಅಣ್ಣಾ ಯೂನಿವರ್ಸಿಟಿ ಚೆನ್ನೈ 9ನೇ ಮತ್ತು ಕೋಲ್ಕತ್ತಾದ ಜಾಧವ್ಪುರ ಯೂನಿವರ್ಸಿಟಿ 10ನೇ ಸ್ಥಾನವನ್ನು ಪಡೆದುಕೊಂಡಿದೆ.
25 ಅತ್ಯುನ್ನತ ಎಂಜಿನಿಯರಿಂಗ್ ಕಾಲೇಜುಗಳ ಪೈಕಿ ಕರ್ನಾಟಕದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸುರತ್ಕಲ್(NITK) 22ನೇ ಸ್ಥಾನವನ್ನು ಪಡೆದುಕೊಂಡಿದೆ. ಇಲ್ಲಿ 242 ಪಿಎಚ್ಡಿ ಪಡೆದ ಉಪನ್ಯಾಸಕರಿದ್ದಾರೆ.
ಪಟ್ಟಿಯಲ್ಲಿ ಸ್ಥಾನ ಪಡೆದ ಕರ್ನಾಟಕದ ಏಕೈಕ ಸಂಸ್ಥೆ ಎನ್ಐಟಿಕೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.