ಮುಂಬಯಿ: ಮಹಿಳಾ ವಿಶ್ವಕಪ್ನಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಸೋತರೂ ಕೋಟ್ಯಾಂತರ ಭಾರತೀಯರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ತಮ್ಮ ಅದ್ಭುತ ಪ್ರದರ್ಶನದಿಂದ ಪ್ರತಿಯೊಬ್ಬರು ತಮ್ಮ ಬಗ್ಗೆ ಹೆಮ್ಮೆ ಪಡುವಂತೆ ಈ ಆಟಗಾರ್ತಿಯರು ಮಾಡಿದ್ದಾರೆ.
ದೇಶದ ಗಣ್ಯಾತೀಗಣ್ಯರು ಕ್ರಿಕೆಟ್ ವನಿತೆಯರನ್ನು ಶ್ಲಾಘಿಸಿದ್ದಾರೆ. ಇದೀಗ ನವೀನ ಜಾಹೀರಾತುಗಳಿಗೆ ಹೆಸರಾಗಿರುವ ಅಮೂಲ್ ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಆಟಗಾರ್ತಿಯರಿಗೆ ಗೌರವ ಸಲ್ಲಿಸಿದೆ.
’ದೆ ಬ್ಲ್ಯೂ ಅವರ್ ಮೈಂಡ್ಸ್’ ಎಂದಿರುವ ಅಮೂಲ್, ಭಾರತೀಯ ತಂಡದ ಪ್ರದರ್ಶನವನ್ನು ‘ಬಟರೀನ್ ಪ್ರದರ್ಶನ್’ ಎಂದು ಕರೆದಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ಜಾಹೀರಾತಿಗೆ ಭಾರೀ ಪ್ರಶಂಸೆ ವ್ಯಕ್ತವಾಗಿದ್ದು, ಕೆಲವೇ ಕ್ಷಣದಲ್ಲಿ ಅಪಾರ ಶೇರಿಂಗ್ ಮತ್ತು ರಿಯಾಕ್ಷನ್ಗಳನ್ನು ಪಡೆದುಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.