ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭಾರತದ ಅತೀ ನೆಚ್ಚಿನ ರಾಜಕಾರಣಿ ಎಂದು ಅಮೆರಿಕಾ ಪತ್ರಿಕೆಯೊಂದರ ಲೇಖನದಲ್ಲಿ ಬಣ್ಣಿಸಲಾಗಿದೆ.
ವಾಲ್ ಸ್ಟ್ರೀಟ್ ಜರ್ನಲ್ನಲ್ಲಿ ಬರೆದ ಲೇಖನದಲ್ಲಿ ಹೂವರ್ ಇನ್ಸ್ಟಿಟ್ಯೂಷನ್ ಯೂನಿವರ್ಸಿಟಿಯ ಫೆಲೋ ತುಂಕು ವರದರಾಜನ್ ಅವರು, ಸುಷ್ಮಾ ವಿಶ್ವದ ಅತೀದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಅತೀ ನೆಚ್ಚಿನ ರಾಜಕಾರಣಿ ಎಂದಿದ್ದಾರೆ.
ತನ್ನ ಪ್ರಸ್ತುತ ಪಾತ್ರದಿಂದಾಗಿ ಅವರು ಭಾರತ ನೆಚ್ಚಿನ ರಾಜಕಾರಣಿಯಾಗಿದ್ದಾರೆ, ವಿದೇಶದಲ್ಲಿ ಸಂಕಷ್ಟಕ್ಕೊಳಗಾಗಿರುವ ಭಾರತೀಯರಿಗಾಗಿ ಅವರು ಅವಿರತ ಪರಿಶ್ರಮ ಪಡುತ್ತಿರುವುದೇ ಇದಕ್ಕೆ ಕಾರಣ ಎಂದಿದ್ದಾರೆ.
8.69 ಮಿಲಿಯನ್ ಟ್ವಿಟರ್ ಫಾಲೋವರ್ಗಳನ್ನು ಆಕೆ ಹೊಂದಿದ್ದು, ಸಹಾಯ ಕೇಳಿದವರಿಗೆ ತ್ವರಿತ ಸ್ಪಂದನೆ ನೀಡುತ್ತಾರೆ. ಭಾರತ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿಯಿದ್ದರೂ ಹಲವಾರು ಪಾಕಿಸ್ಥಾನಿಯರು ಅವರಿಗೆ ಟ್ವಿಟ್ ಮಾಡಿ ಸಹಾಯ ಕೇಳುತ್ತಿದ್ದಾರೆ ಎಂದು ಲೇಖನದಲ್ಲಿ ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.