ವಿಜಯವಾಡ: ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ವಿಜಯವಾಡದಲ್ಲಿ ವಿದ್ಯಾವಾಣಿ ಯೋಜನೆಯನ್ನು ಆರಂಭಿಸಿದ್ದು, ಈ ಯೋಜನೆಯಡಿ 4 ಸಾವಿರ ಶಾಲೆಗಳು ಡಿಜಿಟಲೀಕರಣಗೊಳ್ಳಲಿದೆ.
ಈಗಾಗಲೇ 97 ವರ್ಷದ ಇತಿಹಾಸವುಳ್ಳ ಮುನ್ಸಿಪಲ್ ಹೈಸ್ಕೂಲ್ನ್ನು ಡಿಜಟಲೀಕರಣಗೊಳಿಸಲಾಗಿದ್ದು, ಅಲ್ಲಿ ಸ್ಕ್ರೀನ್, ಪ್ರೊಜೆಕ್ಟರ್, ಕಂಪ್ಯೂಟರ್ಗಳನ್ನು ಅಳವಡಿಸಲಾಗಿದೆ. 61 ತರಗತಿಗಳನ್ನು ಡಿಜಟಲ್ ಮಾಡಲಾಗಿದೆ.
ವಿಶ್ಯುಲ್ ಪ್ರೆಸೆಂಟೇಶನ್, 3ಡಿ ಮಾಡೆಲ್ ಸೇರಿದಂತೆ ಇತರ ಇನ್ನೋವೇಟಿವ್ ರೀತಿಯಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡುವ ವ್ಯವಸ್ಥೆಗಳನ್ನು ಈ ಯೋಜನೆಯಡಿ ಹಮ್ಮಿಕೊಳ್ಳಲಾಗಿದೆ.
ನಾಯ್ಡು ಅವರು ವಿದ್ಯಾವಾಣಿ ಯೋಜನೆಗೆ ಚಾಲನೆ ನೀಡಿ, ವರ್ಚುವಲ್ ಕ್ಲಾಸ್ರೂಮ್ ಸಂಭಾಷಣೆ ಕಾರ್ಯಕ್ರಮದ ಮುಖೇನ 28 ಶಾಲೆಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಂದಿಗೆ ಸಂವಾದ ನಡೆಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.