ಭೋಪಾಲ್ : ಮಧ್ಯಪ್ರದೇಶ ಸರ್ಕಾರವು ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ 50 ಲಕ್ಷ ರೂ. ಬಹುಮಾನವನ್ನು ನೀಡುವುದಾಗಿ ಘೋಷಿಸಿದೆ.
ಭಾನುವಾರ ರಾತ್ರಿ ಲಾರ್ಡ್ಸ್ ಸ್ಟೇಡಿಯಂನಲ್ಲಿ ನಡೆದ ಮಹಿಳಾ ವಿಶ್ವಕಪ್ ಫೈನಲ್ನಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್ 9 ರನ್ ಜಯ ಗಳಿಸಿ ವಿಶ್ವ ಕಪ್ ಗೆದ್ದಿತ್ತು. ಭಾರತ ತಂಡವು ರನ್ನರ್ ಅಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ 50 ಲಕ್ಷ ರೂ. ಬಹುಮಾನವನ್ನು ಘೋಷಿಸಿದ್ದಾರೆ ಮತ್ತು ಅವರಿಗೆ ಭವ್ಯ ಸಮಾರಂಭವನ್ನು ಏರ್ಪಡಿಸಿ ಅವಾರ್ಡ್ ನೀಡಲಾಗುವುದು ಎಂದು ಟ್ವೀಟ್ ಮಾಡಿದ್ದಾರೆ.
ನಮ್ಮ ಹೆಣ್ಣು ಮಕ್ಕಳು ಭಾರತಕ್ಕೆ ಹಮ್ಮೆ ತಂದುಕೊಟ್ಟಿದ್ದಾರೆ. ವಿಶ್ವಕಪ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿ ಎಲ್ಲರ ಹೃದಯ ಗೆದ್ದಿದ್ದಾರೆ. ಸೋಲು ಗೆಲುವು ಆಟದ ಒಂದು ಭಾಗ. ಭಾರತೀಯ ಮಹಿಳಾ ಕ್ರಿಕೆಟ್ ತಂಡ ಬಹಳಷ್ಟು ಜನರಿಗೆ ಪ್ರೇರಣೆಯಾಗಲಿದೆ. ಭೋಪಾಲ್ನಲ್ಲಿ ಭವ್ಯ ಸಮಾರಂಭ ಎರ್ಪಡಿಸಿ ಅವರಿಗೆ ಸನ್ಮಾನ ಮಾಡಿ 50 ಲಕ್ಷ ರೂ. ಬಹುಮಾನವನ್ನು ನೀಡಲಾಗುವುದು ಎಂದು ತಮ್ಮ ಟ್ವೀಟ್ಗಳಲ್ಲಿ ತಿಳಿಸಿದ್ದಾರೆ.
MP Govt. will felicitate @BCCIWomen World Cup team in a grand ceremony in Bhopal & award a prize of Rs. 50 lakhs.
— ShivrajSingh Chouhan (@ChouhanShivraj) July 23, 2017
Winning & loosing is just a part of game. #WomensWorldCup2017 has been a comprehensive tournament for @BCCIWomen which will inspire many.
— ShivrajSingh Chouhan (@ChouhanShivraj) July 23, 2017
Our daughters have made India proud & won millions of hearts with their stellar performance in #WomensWorldCup2017.
— ShivrajSingh Chouhan (@ChouhanShivraj) July 23, 2017
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.