ಮುಂಬಯಿ: ಇನ್ನು ಮುಂದೆ ಮಹಾರಾಷ್ಟ್ರದಲ್ಲಿ ಸಾಮಾನ್ಯ ಜನರ ವಿಮಾನ ಪ್ರಯಾಣ ಅತ್ಯಂತ ಸರಳವಾಗಲಿದೆ. ಕೈಗೆಟುಕುವ ದರದಲ್ಲಿ, ಸ್ಥಳಿಯ ಪ್ರದೇಶಗಳಿಗೆ ಹಾರುವ ಅವಕಾಶ ಅವರಿಗೆ ಲಭ್ಯವಾಗಲಿದೆ.
ಮಹಾರಾಷ್ಟ್ರ ಸರ್ಕಾರ ತನ್ನ ರಾಜ್ಯದ ೯ ಸಣ್ಣ ನಗರಗಳಲ್ಲಿ ವಿಮಾನ ನಿಲ್ದಾಣಗಳನ್ನು ಸ್ಥಾಪನೆ ಮಾಡಲು ಯೋಜನೆ ರೂಪಿಸಿದೆ. ಕೇಂದ್ರ ಪ್ರಾದೇಶಿಕ ಸಂಪರ್ಕ ಯೋಜನೆಯಡಿ ಇದನ್ನು ಜಾರಿಗೊಳಿಸಲು ಮುಂದಾಗಿದೆ.
ನಂದೇದ್, ಸೋಲಾಪುರ್, ಕೊಲ್ಹಾಪುರ್, ಜಗ್ಲೋನ್, ನಾಸಿಕ್, ರತ್ನಗಿರಿ, ಸಿಂಧುದುರ್ಗ್, ಗೋಂಡಿಯ, ಅಮರಾವತಿಗಳಲ್ಲಿ ವಿಮಾನನಿಲ್ದಾಣಗಳು ಸ್ಥಾಪನೆಯಾಗಲಿದೆ. ಈ ನಗರಗಳು ಒಂದನ್ನೊಂದು ವಾಯು ಮಾರ್ಗದ ಮೂಲಕ ಸಂಪರ್ಕಿಸಲಿವೆ. ನಾದೆದ್ನಲ್ಲಿ ವಿಮಾನ ಹಾರಾಟ ಈಗಾಗಲೇ ಆರಂಭಗೊಂಡಿದೆ.
1 ವರ್ಷದಲ್ಲಿ ಈ ಏರ್ಪೋರ್ಟ್ಗಳು ಸ್ಥಾಪನೆಯಾಗಲಿದೆ, ಇವುಗಳಿಗೆ ಫೈರ್ ಸರ್ವಿಸ್ ಮತ್ತು ಭದ್ರತೆಯನ್ನು ರಾಜ್ಯವೇ ಉಚಿತವಾಗಿ ನೀಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.