ಮೊಹಾಲಿ: ಸಿಗರೇಟು ಸೇವನೆ ಮತ್ತು ತಂಬಾಕು ಸೇವನೆಯನ್ನು ತಡೆಯುವ ಸಲುವಾಗಿ ಜಾರಿಗೆ ತರಲಾದ ಕಾಯ್ದೆಯಡಿ ಸಾರ್ವಜನಿಕ ಸ್ಥಳದಲ್ಲಿ ಸಿಗರೇಟು ಸೇವಿಸುವವರಿಗೆ ದೇಶದಾದ್ಯಂತ ದಂಡವನ್ನು ವಿಧಿಸಲಾಗುತ್ತಿದೆ.
ಪಂಜಾಬ್ನ ಮೊಹಾಲಿ ಆರೋಗ್ಯ ಇಲಾಖೆ ಈ ನಿಟ್ಟಿನಲ್ಲಿ ಮುಂಚೂಣಿಯಲ್ಲಿದ್ದು, 2017ರ ಜೂನ್ವರೆಗೆ ರೂ.37,160 ದಂಡ ಸಂಗ್ರಹಿಸಿದೆ.
ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನ ಕಾಯ್ದೆ 2003ರಡಿ ಒಟ್ಟು 312 ತಪ್ಪಿತಸ್ಥರಿಗೆ ದಂಡ ವಿಧಿಸಿದೆ. ಪಂಚಾಬ್ನಲ್ಲಿ 8,077 ತಪ್ಪಿತಸ್ಥರಿಂದ 480,965 ರೂಪಾಯಿ ದಂಡ ಸಂಗ್ರಹಿಸಿದೆ.
ಸಾರ್ವಜನಿಕವಾಗಿ ಸಿಗರೇಟು ಸೇದುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಪಂಜಾಬ್ ಸರ್ಕಾರ ಎಲ್ಲಾ ಜಿಲ್ಲಾಡಳಿತಗಳಿಗೂ ಆದೇಶಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.