ನವದೆಹಲಿ: ಭಯಾನಕ ಮಾರಕ ಕಾಯಿಲೆ ಎಚ್ಐವಿ/ ಏಡ್ಸ್ಗೆ ಸಮರ್ಪಕವಾದ ಔಷಧಿಯನ್ನು ಕಂಡುಹಿಡಿಯುವುದು ಈಗಲೂ ವಿಜ್ಞಾನಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದಕ್ಕೆ ಸಂಬಂಧಿಸಿದ ಸಂಶೋಧನೆಗಳು ನಿರಂತರವಾಗಿ ಮುಂದುವರೆಯುತ್ತಿದೆ.
ಆದರೀಗ ಅನಿರೀಕ್ಷಿತವೆಂಬಂತೆ ಏಡ್ಸ್ ಚಿಕಿತ್ಸೆಗೆ ಕಾಮಧೇನು ಎನಿಸಿರುವ ಗೋವಿನ ಸಹಾಯ ಪಡೆದು ಔಷಧವನ್ನು ತಯಾರಿಸುವತ್ತ ವಿಜ್ಞಾನಿಗಳ ಸಂಶೋಧನೆ ಹೊರಳಿದೆ.
ಸಂಕೀರ್ಣ ಮತ್ತು ಬ್ಯಾಕ್ಟೀರಿಯಾ ಹೊಂದಿದ ಜೀರ್ಣಾಂಗ ವ್ಯವಸ್ಥೆಯನ್ನು ಹೊಂದಿರುವ ಗೋವು ಅತ್ಯುನ್ನತ ರೋಗ ನಿರೋಧಕ ರಕ್ಷಣೆಯೊಂದಿಗೆ ವಿಕಸನಗೊಂಡಿದೆ. ಹೀಗಾಗೀ ಗೋವಿಗೆ ವಿಶೇಷ ವಿಧದ ಎಚ್ಐವಿಯನ್ನು ಹತ್ತಿಕ್ಕಬಲ್ಲ ಪ್ರತಿಜೀವಕವನ್ನು ಉತ್ಪಾದಿಸುವ ಸಾಮರ್ಥ್ಯವಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಿಸಿದ್ದಾರೆ.
ಎಚ್ಐವಿ ಪೀಡಿತ ವ್ಯಕ್ತಿ ಬೇಕಾದಷ್ಟು ಪ್ರತಿಜೀವಕಗಳನ್ನು ಉತ್ಪಾದಿಸುವ ಸಾಮರ್ಥ್ಯ ಕಳೆದುಕೊಳ್ಳುತ್ತಾನೆ. ಹೀಗಾಗೀಯೇ ಔಷಧಿಗಳನ್ನು ಕಂಡುಹಿಡಿಯುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದೀಗ ಗೋವಿನ ಸಹಾಯದಿಂದ ಈ ದೊಡ್ಡ ಸಮಸ್ಯೆ ಬಗೆಹರಿಯುವುದೇ ಎಂದು ಕಾದು ನೋಡಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.