ನವದೆಹಲಿ: ಶೀಘ್ರದಲ್ಲೇ ಜನರು ರೈಲ್ವೇ ಸ್ಟೇಶನ್ಗಳಲ್ಲೂ ಅತೀ ಕಡಿಮೆ ಬೆಲೆಯ ಜನರಿಕ್ ಔಷಧಗಳನ್ನು ಖರೀದಿ ಮಾಡಬಹುದಾಗಿ. ಈ ಬಗ್ಗೆ ಸಂಸತ್ತಿಗೆ ಬುಧವಾರ ಸರ್ಕಾರ ಮಾಹಿತಿ ನೀಡಿದೆ.
ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾದಡಿ ರೈಲ್ವೇ ಆವರಣದಲ್ಲಿ ಜನೌಷಧಿ ಕೇಂದ್ರಗಳನ್ನು ತೆರೆಯಲು ರೈಲ್ವೇ ಸಚಿವಾಲಯ ಸಮ್ಮತಿ ಸೂಚಿಸಿದೆ ಎಂದು ರೈಲ್ವೇ ಖಾತೆ ರಾಜ್ಯ ಸಚಿವ ರಾಜನ್ ಗೋಹೆನ್ ಲೋಕಸಭೆಗೆ ಲಿಖಿತ ಮಾಹಿತಿ ನೀಡಿದ್ದಾರೆ.
ಈ ಅಭಿಯಾನವನ್ನು ಜನರಿಗೆ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಔಷಧಿಗಳನ್ನು ನೀಡುವ ಉದ್ದೇಶದೊಂದಿಗೆ ಔಷಧಿ ಇಲಾಖೆ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ಆರಂಭಿಸಿದೆ.
ಪ್ರಸ್ತುತ ರೈಲ್ವೇ ವಲಯದಲ್ಲಿ 22 ವಿಶೇಷ ಕೆಮಿಸ್ಟ್ ಸ್ಟಾಲ್ಗಳು, 15 ಕೆಮಿಸ್ಟ್ ಕಾರ್ನರ್ಗಳು ಕಾರ್ಯಾಚರಿಸುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.