ನವದೆಹಲಿ: ಯುವತಿಯರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲು ಮತ್ತು ಪಕ್ಷದ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಂತೆ ಮಾಡುವ ಸಲುವಾಗಿ ದೆಹಲಿ ಬಿಜೆಪಿ ಘಟಕವು 18-25 ವರ್ಷ ವಯೋಮಿತಿಯ ಯುವತಿಯರಿಗಾಗಿ ‘ಯುವತಿ ಪ್ರಕೋಷ್ಠ’ವನ್ನು ಇದೇ ಮೊದಲ ಬಾರಿಗೆ ರಚಿಸಲು ಮುಂದಾಗಿದೆ.
ಈ ಹೊಸ ಮಹಿಳಾ ಘಟಕವು ಮಹಿಳಾ ಮೋರ್ಚಾ ಅಥವಾ ಯುವ ಮೋರ್ಚಾದ ಭಾಗವಾಗಿರುವುದಿಲ್ಲ. ಇದು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ವಿಭಾಗವಾಗಲಿದೆ. 18ರಿಂದ 25 ವರ್ಷ ವಯಸ್ಸಿನ ಯುವತಿಯರು ಇದರಲ್ಲಿ ಇರಲಿದ್ದಾರೆ.
ಯುವ ಮಹಿಳೆಯನ್ನು ಅದರಲ್ಲೂ ಮನೆಯಲ್ಲೇ ಇರುವ ಯುವತಿಯನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಈ ಯುವತಿ ಪ್ರಕೋಷ್ಠದ ಸ್ಥಾಪನೆಗೆ ಬಿಜೆಪಿ ಮುಂದಾಗಿದೆ ಎಂದು ದೆಹಲಿ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ರಾಮ್ ಲಾಲ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.