ವಾಷಿಂಗ್ಟನ್: ಉಗ್ರರಿಗೆ ಸುರಕ್ಷಿತ ತಾಣಗಳನ್ನು ಒದಗಿಸುವ ದೇಶಗಳ ಪಟ್ಟಿಯಲ್ಲಿ ಪಾಕಿಸ್ಥಾನವನ್ನೂ ಅಮೆರಿಕಾ ಸೇರಿಸಿಕೊಂಡಿದೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಪಾಕಿಸ್ಥಾನವನ್ನು ಮುಜುಗರಕ್ಕೀಡು ಮಾಡಿದೆ.
ಪಾಕ್ನಲ್ಲಿ ಲಷ್ಕರ್, ಜೈಶೇ ಮೊಹಮ್ಮದ್ನಂತಹ ಉಗ್ರ ಸಂಘಟನೆಗಳು ನಿರಂತರವಾಗಿ ಕಾರ್ಯಾಚರಣೆ, ತರಬೇತಿ, ಸಂಘಟನೆ ಮತ್ತು ಅನುದಾನ ಸಂಗ್ರಹಗಳನ್ನು ಮಾಡುತ್ತಿದೆ ಎಂದು ಯುಎಸ್ ತನ್ನ ವಾರ್ಷಿಕ ವರದಿ ‘ಕಂಟ್ರಿ ರಿಪೋರ್ಟ್ ಆನ್ ಟೆರರಿಸಂ’ನಲ್ಲಿ ಆರೋಪಿಸಿದೆ.
ಪಾಕಿಸ್ಥಾನ ತನ್ನ ನೆಲದಲ್ಲಿ ದಾಳಿಗಳನ್ನು ನಡೆಸಿದ ತೆಹ್ರೀಕ್ ಇ ತಾಲಿಬಾನ್ನಂತಹ ಉಗ್ರ ಸಂಘಟನೆಗಳ ವಿರುದ್ಧ ಮಾತ್ರ ಮಿಲಿಟರಿ ಕಾರ್ಯಾಚರಣೆ ನಡೆಸಿದೆ ಎಂದಿದೆ.
ಅಘ್ಘಾನ್ ತಾಲಿಬಾನ್ ಅಥವಾ ಹಕ್ಕಾನಿ ಉಗ್ರ ಸಂಘಟನೆಗಳ ವಿರುದ್ಧ ಪಾಕಿಸ್ಥಾನ ಯಾವ ಕ್ರಮಗಳನ್ನೂ ತೆಗೆದುಕೊಂಡಿಲ್ಲ. ಬದಲಾಗಿ ಇವುಗಳಿಗೆ ಸಹಕಾರವನ್ನು ನೀಡುತ್ತಲೇ ಬಂದಿದೆ ಎಂದು ಅಮೆರಿಕ ಆರೋಪಿಸಿದೆ.
ವರದಿಯ ಪ್ರಕಾರ ಉಗ್ರರಿಗೆ ಸುರಕ್ಷಿತ ತಾಣವಾಗಿರುವ ಇತರ ರಾಷ್ಟ್ರಗಳೆಂದರೆ ಅಫ್ಘಾನಿಸ್ತಾನ, ಸೊಮಾಲಿಯಾ, ಈಜಿಪ್ತ್, ಇರಾಕ್, ಲೆಬನಾನ್, ಲಿಬಿಯಾ,ಮ ಯೆಮೆನ್, ಕೊಲಂಬಿಯಾ, ವೆನುಝುವೆಲ್ಲಾ ಇತ್ಯಾದಿಗಳು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.