ಅಹ್ಮದಾಬಾದ್: ಕ್ಯಾಂಟೀನ್ಗಳ ಮೂಲಕ ಅತ್ಯಂತ ಕಡಿಮೆ ದರಕ್ಕೆ ಬಡವರಿಗೆ ಆಹಾರ ಒದಗಿಸುವ ತಮಿಳುನಾಡು, ಒರಿಸ್ಸಾ ಮತ್ತು ರಾಜಸ್ಥಾನ ರಾಜ್ಯಗಳ ಸಾಲಿಗೆ ಇದೀಗ ಗುಜರಾತ್ ಕೂಡ ಸೇರಿಕೊಂಡಿದೆ.
ಶ್ರಮಿಕ್ ಅನ್ನಪೂರ್ಣ ಯೋಜನೆಯನ್ನು ಗುಜರಾತ್ ಸರ್ಕಾರ ಆರಂಭಿಸಿದ್ದು, ಇಲ್ಲಿ ಕಾರ್ಮಿಕರು ಕೇವಲ 10 ರೂಪಾಯಿಗೆ ಹೊಟ್ಟೆ ತುಂಬ ಊಟ ಮಾಡಬಹುದಾಗಿದೆ.
5 ರೊಟ್ಟಿ, ತರಕಾರಿ, ಅನ್ನ, ಉಪ್ಪಿನಕಾಯಿ, ಕಾಯಿ ಮೆಣಸುಗಳು ಊಟದಲ್ಲಿರಲಿದೆ. ಕಾರ್ಮಿಕ ಮಾರುಕಟ್ಟೆಗಳ ಸಮೀಪ ಈ ಸ್ಟಾಲ್ಗಳನ್ನು ಸ್ಥಾಪನೆಯಾಗಿದ್ದು, ಬಡ ಕಾರ್ಮಿಕರಿಗೆ ಬಹಳ ಪ್ರಯೋಜನಕಾರಿಯಾಗಿದೆ.
ರಾಜ್ಯಾದ್ಯಂತ ಒಟ್ಟು 83 ಸ್ಟಾಲ್ಗಳನ್ನು ಸ್ಥಾಪನೆ ಮಾಡಲಾಗಿದೆ. ದಿನಕ್ಕೆ 25 ಸಾವಿರ ಕಾರ್ಮಿಕರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಮುಂಬರುವ ದಿನಗಳಲ್ಲಿ 5 ಲಕ್ಷ ನೋಂದಾಯಿತ ಕಾರ್ಮಿಕರಿಗೆ ಈ ಸೌಲಭ್ಯ ನೀಡಲು ಗುಜರಾತ್ ಸರ್ಕಾರ ಚಿಂತನೆ ನಡೆಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.