ನವದೆಹಲಿ: ದೇಶದಲ್ಲಿ ಅಧಿಕೃತವಾಗಿ ಎಷ್ಟು ಪೊಲೀಸರು ಇರಬೇಕೋ ಅಷ್ಟು ಪೊಲೀಸರಿಲ್ಲ. ಒಟ್ಟು 5 ಲಕ್ಷ ಪೊಲೀಸ್ ಸಿಬ್ಬಂದಿಯ ಕೊರತೆಯಿದೆ ಎಂದು ಕೇಂದ್ರ ಗೃಹಸಚಿವಾಲಯ ಲೋಕಸಭೆಗೆ ಮಾಹಿತಿ ನೀಡಿದೆ.
ದೇಶದಲ್ಲಿ ಅಧಿಕೃತವಾಗಿ ಇರಬೇಕಾದ ಐಪಿಎಸ್ ಅಧಿಕಾರಿಗಳ ಸಂಖ್ಯೆಗಿಂತ ಕಡಿಮೆ ಐಪಿಎಸ್ ಅಧಿಕಾರಿಗಳು ಇದ್ದಾರೆ ಎಂದು ಕೇಂದ್ರ ಗೃಹ ಖಾತೆ ರಾಜ್ಯಸಚಿವ ಹಂಸರಾಜ್ ಜಿ ಅಹಿರ್ ತಿಳಿಸಿದ್ದಾರೆ.
ದೇಶದಲ್ಲಿ ಐಪಿಎಸ್ ಅಧಿಕಾರಿಗಳು ಇರಬೇಕಾದ ಅಧಿಕೃತ ಸಂಖ್ಯೆ 4,843. ಆದರೆ 2017ರ ಜನವರಿ 1ರಲ್ಲಿ ಇವರ ಸಂಖ್ಯೆ ಇದ್ದುದು ಕೇವಲ 3,905 ಎಂದು ಅವರು ಮಾಹಿತಿ ನೀಡಿದ್ದಾರೆ.
ದೇಶದಲ್ಲಿ 22,80,691 ಅಧಿಕೃತವಾಗಿ ಪೊಲೀಸರ ಸಂಖ್ಯೆ ಇರಬೇಕು, ಆದರೆ ಪ್ರಸ್ತುತ ಕೇವಲ 17,31,666 ಪೊಲೀಸ್ ಸಿಬ್ಬಂದಿಗಳು ಮಾತ್ರ ಇದ್ದಾರೆ ಎಂದಿದ್ದಾರೆ.
ವಾರ್ಷಿಕವಾಗಿ 150ಐಪಿಎಸ್ ಅಧಿಕಾರಿಗಳನ್ನು ದೇಶದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.