ನವದೆಹಲಿ : ಕೇಂದ್ರ ಸಚಿವರಾದ ವಿಜಯ್ ಗೋಯಲ್ ಮತ್ತು ಬಾಬುಲ್ ಸುಪ್ರಿಯೋ ಅವರು ಶನಿವಾರ ದೆಹಲಿಯಲ್ಲಿ 8ನೇ ’ಸ್ಲಂ ಯುವ ದೌಡ್’ಗೆ ಚಾಲನೆ ನೀಡಿದ್ದಾರೆ.
ಕುತುಬ್ ಮಿನಾರ್ನಿಂದ ಆರಂಭವಾದ ಓಟ ಮೆಹರೌಲಿಯ ಸರ್ಕಾರಿ ಶಾಲೆಯ ಮೈದಾನದಲ್ಲಿ ಅಂತ್ಯಗೊಂಡಿತು. ದೆಹಲಿ ಸ್ಲಂನ ಸುಮಾರು 3000 ಯುವಕರು ಇದರಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಸಂಗೀತಗಾರರೂ ಆಗಿರುವ ಸಚಿವ ಬಾಬುಲ್ ಸುಪ್ರಿಯೋ ಅವರು ಹಾಡನ್ನು ಹಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಗೋಯಲ್, ಇದು ಎಲ್ಲಾ ಓಟದಂತಲ್ಲ. ಉತ್ತಮ ನಾಳೆಗಾಗಿನ ಓಟ. ರಾಷ್ಟ್ರ ನಿರ್ಮಾಣಕ್ಕೆ ಪ್ರತಿ ಯುವಕರು ತಮ್ಮ ಕೌಶಲ್ಯವನ್ನು ಬಳಸುವ ನವಭಾರತಕ್ಕಾಗಿನ ಓಟ ಎಂದು ಹೇಳಿದರು.
ಕ್ರೀಡಾಸಚಿವಾಲಯವು ಈ ಓಟವನ್ನು ಆಯೋಜಿಸಿತ್ತು. ’ಅಡಾಪ್ಟ್ ಸ್ಲಂ ಕ್ಯಾಂಪೇನ್’ನ ಭಾಗವಾಗಿ ಇದನ್ನು ಆಯೋಜನೆ ಮಾಡಲಾಗಿತ್ತು.
ಎನ್ಎಸ್ಎಸ್, ಸ್ಕೂಲ್, ಎನ್ಜಿಒ, ರೋಟರಿ ಕ್ಲಬ್ಗಳನ್ನು ಈ ಅಡಾಪ್ಟ್ ಸ್ಲಂ ಅಭಿಯಾನವು ಒಳಗೊಂಡಿದೆ.
ಒಟ್ಟು 11 ಸ್ಲಂ ಯುವ ಓಟವನ್ನು ಆಯೋಜನೆ ಮಾಡಲಾಗಿದ್ದು, ಅದರಲ್ಲಿ 8 ನ್ನು ಈಗಾಗಲೇ ಯಶಸ್ವಿಯಾಗಿ ನಡೆಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.