ಬೆಂಗಳೂರು: ಬೆಂಗಳೂರು ಮೂಲದ ಅತ್ಯಂತ ನವ ಸ್ಟಾರ್ಟ್ಅಪ್ Halli Labsನ್ನು ಗೂಗಲ್ ಸ್ವಾಧೀನಪಡಿಸಿಕೊಂಡಿದೆ. ಹಳೆ ಸಮಸ್ಯೆಗಳನ್ನು ಪರಿಹರಿಸುವ ವಿಸ್ತೃತ ಅಧ್ಯಯನ ಮತ್ತು ಮೆಶಿನ್ ಲರ್ನಿಂಗ್ ಸಿಸ್ಟಮ್ ನಿರ್ಮಾಣದತ್ತ ಈ ಕಂಪನಿ ಗಮನ ಕೇಂದ್ರೀಕರಿಸಿದೆ.
ಗೂಗಲ್ನ ಮುಂದಿನ ಬಿಲಿಯನ್ ಯೂಸರ್ಸ್ ಟೀಂಗೆ ಸೇರ್ಪಡೆಗೊಂಡು ಹೆಚ್ಚಿನ ತಂತ್ರಜ್ಞಾನ ಮತ್ತು ಮಾಹಿತಿಯನ್ನು ಜಗತ್ತಿನಾದ್ಯಂತದ ಹೆಚ್ಚಿನ ಜನರ ಕೈಗೆ ಸಿಗುವಂತೆ ಮಾಡಲು ಸಹಾಯ ಮಾಡುವುದಾಗಿ ಕಂಪನಿ ಹೇಳಿಕೊಂಡಿದೆ.
Halli Labs ಈ ವಿಷಯವನ್ನು ಘೋಷಿಸಿದೆ. ಮಾತ್ರವಲ್ಲ, ಗೂಗಲ್ನ ಪ್ರೊಡಕ್ಟ್ ಮ್ಯಾನೇಜರ್ ವಿಪಿ ಸೇಸರ್ ಸೇನ್ಗುಪ್ತಾ ಸ್ವಾಧೀನದ ಈ ವಿಷಯವನ್ನು ಟ್ವಿಟರ್ ಮೂಲಕ ಸ್ಪಷ್ಟಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.