ಚೆನ್ನೈ: ನೌಕಾ ಪಡೆಯ ಸಮರಾಭ್ಯಾಸದ 21ನೇ ಸಂಚಿಕೆ ‘ಮಲಬಾರ್-2017’ ಬಂಗಾಳಕೊಲ್ಲಿಯಲ್ಲಿ ಸೋಮವಾರದಿಂದ ಆರಂಭವಾಗಿದೆ. ಜುಲೈ 17ರವರೆಗೆ ಮುಂದುವರೆಯಲಿದೆ. ಭಾರತ, ಅಮೆರಿಕಾ, ಜಪಾನ್ ದೇಶಗಳ ನೌಕಾಪಡೆಗಳು ಇದರಲ್ಲಿ ಭಾಗಿಯಾಗಿವೆ.
ಭಾರತ, ಜಪಾನ್, ಅಮೆರಿಕಾದ ನೌಕೆಗಳ ಪರಸ್ಪರ ಕಾರ್ಯಸಾಧ್ಯತೆಯನ್ನು ವೃದ್ಧಿಸಿಕೊಳ್ಳಲು ಮತ್ತು ಮ್ಯಾರಿಟೈಮ್ ಸೆಕ್ಯೂರಿಟಿ ಆಪರೇಶನ್ ಸೇರಿದಂತೆ ಹಲವು ವಲಯಗಳಲ್ಲಿನ ಬಾಂಧವ್ಯವನ್ನು ಬಲಪಡಿಸುವ ಗುರಿಯೊಂದಿಗೆ ಸಮರಭ್ಯಾಸ ನಡೆಯಲಿದೆ.
ಐಎನ್ಎಸ್ ವಿಕ್ರಮಾದಿತ್ಯ ಸೇರಿದಂತೆ, ನಿರ್ದೇಶಿತ ಕ್ಷಿಪಣಿ ವಿಧ್ವಂಸಕ ರಣವೀರ್, ದೇಶೀಯ ಸ್ಟೀಲ್ತ್ ಫ್ರಿಗೇಟ್ಸ್ ಶಿವಾಲಿಕ್ ಮತ್ತು ಸಹ್ಯಾದ್ರಿ, ದೇಶೀಯ ASW ಕಾರ್ವೆಟ್ ಕಾಮೊರ್ಟಾ, ಕ್ಷಿಪಣಿ ಕೊರ್ವೆಟ್ಗಳಾದ ಕೋರ ಮತ್ತು ಕಿರ್ಪಾನ್, ಒಂದು ಸಿಂಧುಘೋಶ್ ವರ್ಗದ ಜಲಾಂತರ್ಗಾಮಿ, ಫ್ಲೀಟ್ ಟ್ಯಾಂಕರ್ ಐಎನ್ಎಸ್ ಜ್ಯೋತಿ ಭಾರತವನ್ನು ಪ್ರತಿನಿಧಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.