ಟೆಲ್ ಅವೀವ್: ಉತ್ತರ ಇಸ್ರೇಲ್ನ ಓಲ್ಗ ಬೀಚ್ನಲ್ಲಿ ಒಟ್ಟಿಗೆ ಇರುವ ಸಹಿ ಹಾಕಿದ ಭಾವಚಿತ್ರವೊಂದನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಉಡುಗೊರೆಯಾಗಿ ನೀಡಿದ್ದಾರೆ.
ಈ ಭಾವಚಿತ್ರದಲ್ಲಿ ಉಭಯ ನಾಯಕರ ಸ್ನೇಹದ ಬಗೆಗಿನ ಸಂದೇಶಗಳನ್ನೂ ಬರೆಯಲಾಗಿದೆ.
ಉಡುಗೊರೆಯಾಗಿ ಭಾವಚಿತ್ರವನ್ನು ಪಡೆದ ಬಳಿಕ ಮೋದಿ ನೆತನ್ಯಾಹು ಅವರಿಗೆ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.
ಟ್ವಿಟ್ ಮಾಡಿರುವ ಮೋದಿ, ‘ಸಹಿವುಳ್ಳ ಭಾವಚಿತ್ರಕ್ಕಾಗಿ, ಅದ್ಭುತ ಆತಿಥ್ಯಕ್ಕಾಗಿ, ಭಾರತ-ಇಸ್ರೇಲ್ ಬಾಂಧವ್ಯದ ಒಲವಿಗಾಗಿ ಧನ್ಯವಾದ ಗೆಳೆಯ, ಪಿಎಂ ನೆತನ್ಯಾಹು’ ಎಂದಿದ್ದಾರೆ.
ಅಲ್ಲದೇ, ‘ಸ್ನೇಹಿತನೊಂದಿಗೆ ಬೀಚ್ಗೆ ತೆರಳುವುದಕ್ಕಿಂತ ಅಹ್ಲಾದಕರವಾದುದು ಮತ್ತೊಂದಿಲ್ಲ’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.