ನವದೆಹಲಿ: ಹಕ್ಕಿ ಜ್ವರ H5N1 ಮತ್ತು H5N8ಗಳಿಂದ ಮುಕ್ತವೆಂದು ಭಾರತ ತನ್ನನ್ನು ತಾನು ಘೋಷಿಸಿಕೊಂಡಿದೆ.
ಎಲ್ಲಾ ರಾಜ್ಯಗಳಲ್ಲೂ ಕಣ್ಗಾವಲು ಇರಿಸಿ ಪರೀಕ್ಷಿಸಲಾಗಿದ್ದು, ಈ ಕಾಯಿಲೆಯ ಇರುವಿಕೆಯ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಹೀಗಾಗಿ ಇವುಗಳಿಂದ ಮುಕ್ತವಾಗಿರುವುದಾಗಿ ಭಾರತ ಘೋಷಿಸಿಕೊಂಡಿದೆ.
‘ದೇಶದ ಉದ್ದಗಲಕ್ಕೂ ಕಣ್ಗಾವಲು ಇರಿಸಲಾಗಿದೆ, ಪ್ರಸ್ತುತ ಅವಿಯನ್ ಇನ್ಫ್ಲುಂಝ ವೈರಸ್ ಇರುವ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ’ ಎಂದು ಕೇಂದ್ರ ಕೃಷಿ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.
2016ರ ಅಕ್ಟೋಬರ್-2017ರ ಫೆಬ್ರವರಿ ನಡುವೆ ದೆಹಲಿ, ಗ್ವಾಲಿಯರ್, ರಾಜ್ಪುರ, ಹಿಸ್ಸಾರ್, ಬಳ್ಳಾರಿ, ಅಹ್ಮದಾಬಾದ್ ಸೇರಿದಂತೆ ಹಲವೆಡೆ ಈ ರೋಗಗಳು ಕಾಣಿಸಿಕೊಂಡಿದ್ದವು. ಇದೀಗ ಅವುಗಳು ಸಂಪೂರ್ಣ ನಿರ್ಮೂಲನೆಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.