ಟೆಲ್ ಅವೀವ್ : ಪ್ರಸ್ತುತ ಇಸ್ರೇಲ್ ಪ್ರವಾಸದಲ್ಲಿರುವ ನರೇಂದ್ರ ಮೋದಿಯವರು ಅಲ್ಲಿನ ಭಾರತೀಯ ಸಮುದಾಯಕ್ಕೆ ಭರ್ಜರಿ ಉಡುಗೊರೆಯನ್ನು ನೀಡಿದ್ದಾರೆ.
ದೆಹಲಿ-ಮುಂಬೈ-ಟೆಲ್ ಅವೀವ್ಗೆ ನೇರ ವಿಮಾನವನ್ನು ಘೋಷಿಸಿದ್ದಾರೆ. ಅಲ್ಲದೆ ಓವರ್ಸೀಸ್ ಸಿಟಿಜನ್ ಆಫ್ ಇಂಡಿಯಾ ಕಾರ್ಡ್ನ್ನು ಪಡೆಯಲು ಇರುವ ನಿಯಮಗಳನ್ನು ಸರಳಗೊಳಿಸಿದ್ದಾರೆ.
5000 ಮಂದಿ ಭಾರತೀಯ ಮೂಲದ ಯಹೂದಿಗಳು ಹಾಜರಿದ್ದ ಸಮಾರಂಭದಲ್ಲಿ ಮಾತನಾಡಿದ ಮೋದಿ, ದೆಹಲಿ-ಮುಂಬೈ-ಟೆಲ್ ಅವೀವ್ಗೆ ವಾಯು ಸೇವೆಯನ್ನು ಆರಂಭಿಸುತ್ತಿದ್ದೇವೆ. ಈ ಮೂಲಕ ನಾನು ಇಸ್ರೇಲ್ ಯುವಕರಿಗೆ ಭಾರತಕ್ಕೆ ಭೇಟಿ ಕೊಡುವಂತೆ ಆಹ್ವಾನಿಸುತ್ತಿದ್ದೇನೆ ಎಂದರು.
ಮೋದಿಯ ಈ ಮಾತಿಗೆ ನೆರೆದಿದ್ದ ಸಭಿಕರಿಂದ ಭಾರೀ ಚಪ್ಪಾಳೆ ಸಿಕ್ಕಿದೆ.
ಇಸ್ರೇಲ್ಗಾಗಿ ಕಡ್ಡಾಯ ಮಿಲಿಟರಿ ಸೇವೆಯನ್ನು ಪಡೆದಿರುವ ಭಾರತೀಯ ಮೂಲದ ಜನರೂ ಕೂಡಾ OCI ಕಾರ್ಡ್ನ್ನು ಪಡೆಯಲು ಅರ್ಹರು ಎಂದು ಮೋದಿ ಹೇಳಿದ್ದಾರೆ.
ಇನ್ನೋವೇಶನ್, ಸೈನ್ಸ್ ಮತ್ತು ಟೆಕ್ನಾಲಜಿ ಉಭಯ ದೇಶಗಳ ನಡುವಿನ ಸೇತುವೆ. ನನ್ನ ಭಾರತೀಯ ಸಹೋದರ-ಸಹೋದರಿಯರು ಹಗಲಿರುಳು ದುಡಿದು ಮರುಭೂಮಿಯು ಅರಳುವಂತೆ ಮಾಡಿದ್ದಾರೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.