ಟೆಲ್ ಅವೀವ್ : ಪ್ರಧಾನಿ ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಜೊತೆಗೂಡಿ ಗುರುವಾರ ಹೈಫಾ ಸ್ಮಾರಕಕ್ಕೆ ಭೇಟಿ ನೀಡಿ, ಮೊದಲನೇ ವಿಶ್ವಯುದ್ಧದಲ್ಲಿ ಬಲಿದಾನಗೈದ ಭಾರತೀಯ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
1918 ರಲ್ಲಿ ನಡೆದ ಹೈಫಾ ಯುದ್ಧ ಕೊನೆಯ ಪ್ರಮುಖ ಕ್ಯಾವೆಲರಿ ಕ್ಯಾಂಪೇನ್ ಎಂದು ಮಿಲಿಟರಿ ಇತಿಹಾಸದಲ್ಲಿ ಹೆಸರು ಪಡೆದಿದೆ.
ಇಬ್ಬರೂ ಪ್ರಧಾನಿಗಳು ಎರಡು ಸ್ಮಾರಕಗಳಿಗೆ ತೆರಳಿ ಹೂಗಚ್ಛವಿಟ್ಟು ಗೌರವ ನಮನಗಳನ್ನು ಅರ್ಪಿಸಿದರು. ಒಂದು ಸಮಾಧಿ ಹಿಂದೂ ಯೋಧರದ್ದಾಗಿದ್ದು, ಇನ್ನೊಂದು ಸಮಾಧಿ ಮುಸ್ಲಿಂರದ್ದಾಗಿದೆ.
ಮೊದಲ ವಿಶ್ವಯುದ್ಧದಲ್ಲಿ ಮೇಜರ್ ದಲ್ಪತ್ ಸಿಂಗ್ ಶೇಖಾವತ್ ಅವರ ಪಾತ್ರ ಅವಿಸ್ಮರಣೀಯವಾದದ್ದಾಗಿದ್ದು, ಉಭಯ ನಾಯಕರು ದಲ್ಪತ್ ಸಿಂಗ್ ಅವರ ವೀರಗಾಥೆಯ ಬರಹವನ್ನೊಳಗೊಂಡ ವಿವರವನ್ನು ಅನಾವರಣಗೊಳಿಸಿದರು.
ಹೈಫಾವು ಇಸ್ರೇಲ್ನ ಮೂರನೆಯ ಅತಿ ದೊಡ್ಡ ನಗರವಾಗಿದ್ದು ಯುನೆಸ್ಕೋ ವಿಶ್ವ ಪರಂಪರೆಯ ತಾಣದಲ್ಲೊಂದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.