ನವದೆಹಲಿ: ಬಯಲು ಶೌಚ ಮುಕ್ತಗೊಳ್ಳುವತ್ತ ಭಾರತ ದಾಪುಗಾಲಿಡುತ್ತಿದೆ. ಅಕ್ಟೋಬರ್ ತಿಂಗಳ ವೇಳೆಗೆ ದೇಶದ 6 ರಾಜ್ಯಗಳ ಎಲ್ಲಾ ಪಟ್ಟಣ ಮತ್ತು ನಗರಗಳು ಬಯಲು ಶೌಚಮುಕ್ತ ಎಂಬ ಕೀರ್ತಿಗೆ ಪಾತ್ರವಾಗಲಿದೆ.
ಮಹಾರಾಷ್ಟ್ರ, ತೆಲಂಗಾಣ, ಛತ್ತೀಷ್ಗಢ, ಜಾರ್ಖಾಂಡ್, ಮಧ್ಯಪ್ರದೇಶ, ಕೇರಳಗಳ 1,137 ನಗರಗಳನ್ನು ಅಕ್ಟೋಬರ್ 2ರಂದು ಬಯಲು ಶೌಚ ಮುಕ್ತವೆಂದು ಘೋಷಣೆ ಮಾಡಲಾಗುತ್ತದೆ. ಅಂದು ಸ್ವಚ್ಛ ಭಾರತ ಅಭಿಯಾನ ಆರಂಭಗೊಂಡು 2 ವರ್ಷ ಪೂರೈಸಲಿದೆ.
ಆಂಧ್ರಪ್ರದೇಶ, ಗುಜರಾತ್, ಚಂಡೀಗಢದ 281 ನಗರಗಳನ್ನು ಈಗಾಗಲೇ ಬಯಲು ಶೌಚ ಮುಕ್ತದಡಿ ತರಲಾಗಿದೆ. ಈ ಸ್ವಚ್ಛ ಭಾರತ ಆರಂಭಗೊಂಡ ಬಳಿಕಟ್ಟು 1,418 ನಗರಗಳು ಬಯಲು ಶೌಚಮುಕ್ತಗೊಂಡಂತಾಗಿದೆ.
2019ರ ಅಕ್ಟೋಬರ್ 2ರ ವೇಳೆಗೆ 4,041 ಸಿಟಿಗಳನ್ನು ಬಯಲು ಶೌಚ ಮುಕ್ತಗೊಳಿಸುವ ಗುರಿ ಹೊಂದಲಾಗಿದ್ದು, ಅದರಲ್ಲಿ ಈ 9 ರಾಜ್ಯಗಳು ನಗರಗಳು ಶೇ.39ರಷ್ಟಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.