ನವದೆಹಲಿ : ನಂದನ್ ನೀಲೇಕಣಿ ಹಾಗೂ ಸಂಜೀವ್ ಅಗರ್ವಾಲ್ ಅವರು ಉದ್ಯಮಶೀಲರಿಗೆ $100 ಮಿಲಿಯನ್ ಸ್ಟಾರ್ಟ್ಅಪ್ ಫಂಡ್ ನೆರವು ನೀಡಲು ಮುಂದಾಗಿದ್ದಾರೆ.
ಇನ್ಫೋಸಿಸ್ ಸಹಸಂಸ್ಥಾಪಕ ನಂದನ್ ನೀಲೇಕಣಿ ಮತ್ತು ಹೆಲಿಯಾನ್ನ ಹಿರಿಯ ಆಡಳಿತ ನಿರ್ದೇಶಕ ಸಂಜೀವ್ ಅಗರ್ವಾಲ್ ಅವರು 100 ಮಿಲಿಯನ್ ಡಾಲರ್ ಮೊತ್ತದ ಸ್ಟಾರ್ಟ್ಅಪ್ ಫಂಡ್ ಘೋಷಿಸಿದ್ದಾರೆ.
ಫಂಡಮೆಂಟಮ್ ಪಾರ್ಟ್ನರ್ಶಿಪ್ ಹೆಸರಿನಲ್ಲಿ ಸ್ಟಾರ್ಟ್ಅಪ್ ಫಂಡ್ ನೆರವನ್ನು ನೀಡಲಿದ್ದು, ಭವಿಷ್ಯದಲ್ಲಿ ಶತಕೋಟಿ ಡಾಲರ್ ಮೌಲ್ಯದ ಕಂಪೆನಿಯಾಗಿ ಬೆಳೆಯಬಲ್ಲ ಸಾಮರ್ಥ್ಯ ಹೊಂದಿರುವ ಆರಂಭಿಕ ಕಂಪೆನಿಗಳನ್ನು ಗುರುತಿಸಿ ಅಂಥಹವರಿಗೆ ನೆರವಾಗಲು ಈ ತಂತ್ರಜ್ಞಾನ ನಿಧಿಯ ನೆರವನ್ನು ನೀಡಲಿದ್ದಾರೆ.
ಪ್ರಸ್ತುತ 33 ಮಿಲಿಯನ್ ಡಾಲರ್ ಮೊತ್ತವನ್ನು ಇಬ್ಬರೂ ಉದ್ಯಮಿಗಳು ನೀಡಿದ್ದು, ಇತರ ಉದ್ಯಮಿಗಳೂ ಇದಕ್ಕೆ ಕೈ ಜೋಡಿಸಿ ಇದನ್ನು 200 ಮಿಲಿಯನ್ ಡಾಲರ್ನ ಬೃಹತ್ ನಿಧಿಯಾಗಿ ಅಭಿವೃದ್ಧಿ ಪಡಿಸಲಿದ್ದಾರೆ ಎನ್ನಲಾಗಿದೆ.
ಸ್ಟಾರ್ಟ್ಅಪ್ ಫಂಡ್ ಲಾಜಿಸ್ಟಿಕ್ ಮತ್ತು ಮೂಲಸೌಕರ್ಯ ಸೇರಿದಂತೆ ದೀರ್ಘಾವಧಿ ದೃಷ್ಟಿಕೋನ ಹೊಂದಿರುವ ಉದ್ಯಮಕ್ಕೆ ನೆರವಾಗಲಿದೆ. ಕೆಲ ಯಶಸ್ವಿ ಯುವಕರನ್ನು ಆಯ್ಕೆ ಮಾಡಿ ಭವಿಷ್ಯದಲ್ಲಿ ದೀರ್ಘಾವಧಿಯಲ್ಲಿ ಕಂಪನಿಯನ್ನು ಬೆಳೆಸಲು ವಿಭಿನ್ನ ಯೋಚನೆ ಇರುವಂತಹವರನ್ನು ಬೆಳೆಸಬೇಕು ಎಂಬುದೇ ನಮ್ಮ ಆಶಯ ಎಂದು ನಂದನ್ ನೀಲೇಕಣಿ ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.