ಕೊಚ್ಚಿ: ಕೇರಳ ಯುವಕರು ಇಸಿಸ್ ಉಗ್ರ ಸಂಘಟನೆಯ ಪ್ರಭಾವಕ್ಕೆ ಒಳಗಾಗುವುದನ್ನು ತಪ್ಪಿಸುವ ಸಲುವಾಗಿ ಅಲ್ಲಿನ ಪೊಲೀಸ್ ಇಲಾಖೆ ‘ಆಪರೇಶನ್ ಪಿಜನ್’ ಎಂಬ ಅಭಿಯಾನವನ್ನು ಆರಂಭಿಸಿದ್ದಾರೆ.
ಈ ಅಭಿಯಾನ ಕಾಸರಗೋಡು ಜಿಲ್ಲೆಯ ಕೆಲವು ಭಾಗಗಳಲ್ಲಿ ಮೊದಲು ಆರಂಭಗೊಂಡಿದ್ದು, ಇದೀಗ ರಾಜ್ಯಾದ್ಯಂತ ವಿಸ್ತರಿಸಿದೆ. ಇಸಿಸ್ ಪ್ರಭಾವಕ್ಕೆ ಒಳಪಡುತ್ತಿರುವ ಯುವಕರನ್ನು ಪತ್ತೆ ಮಾಡಿ ಅವರನ್ನು ಪತ್ತೆ ಸಮಾಜದ ಮುಖ್ಯವಾಹಿನಿಗೆ ಕರೆ ತರುವ ಕಾರ್ಯವನ್ನು ಮಾಡಲಾಗುತ್ತಿದೆ.
ಇದುವರೆಗೆ ಇಂತಹ ೩೫೦ ಯುವಕರನ್ನು ಇಸಿಸ್ ಪ್ರಭಾವದಿಂದ ಹೊರ ತರಲಾಗಿದೆ. ಇವರೆಲ್ಲ ಇಸಿಸ್ನೊಂದಿಗೆ ಪ್ರಾಥಮಿಕ ಹಂತದ ಸಂಪರ್ಕದಲ್ಲಿದ್ದರು ಎಂದು ಮೂಲಗಳು ತಿಳಿಸಿವೆ.
ಇದೀಗ ಅಲ್ಲಿನ ಗುಪ್ತಚರದಲ್ಲಿ ಸ್ಪೆಷಲ್ ಟಾಸ್ಕ್ ಫೋರ್ಸ್ನ್ನು ರಚಿಸಲಾಗಿದ್ದು, ಇದರಲ್ಲಿ ಎನ್ಐಎ, ಗುಪ್ತಚರದ ಸದಸ್ಯರುಗಳು ಇದ್ದಾರೆ.
ಕಣ್ಣುರು ಜಿಲ್ಲೆಯಲ್ಲಿ 118 ಯುವಕರನ್ನು, ಮಲಪ್ಪುರಂನಲ್ಲಿ 89 ಯುವಕರನ್ನು, ಕಾಸರಗೋಡಿನಲ್ಲಿ 66, ಕಾಝಿಗೋಡ್ನಲ್ಲಿ 26 ಯುವಕರನ್ನು ಇಸಿಸ್ ಪ್ರಭಾವದಿಂದ ಹೊರತರಲಾಗಿದೆ.
ಈ ಯುವಕರೆಲ್ಲಾ 20ರ ಹರೆಯದವರಾಗಿದ್ದಾರೆ. ಹೆಚ್ಚಿನವರು ಎಂಜಿನಿಯರಿಂಗ್, ಮೆಡಿಕಲ್ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಅಲ್ಲಿನ ಗುಪ್ತಚರ ಮುಖ್ಯಸ್ಥ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.