ಹೈದರಾಬಾದ್: ನೈರ್ಮಲ್ಯವನ್ನು ಉತ್ತಮಪಡಿಸುವ ಸಲುವಾಗಿ ಹೈದರಾಬಾದ್ನಲ್ಲಿ ವಿನೂತನ ಯೋಜನೆಯನ್ನು ಜಾರಿಗೆ ತರಲಾಗಿದೆ. ಎಲ್ಲಾ ಶೌಚಾಲಯಗಳಲ್ಲೂ ಒಂದು ವೋಟಿಂಗ್ ಮಶಿನ್ಗಳನ್ನು ಇಡಲಾಗಿದ್ದು, ಇದರಲ್ಲಿನ ಗುಂಡಿಗಳನ್ನು ಒತ್ತಿ ವೋಟ್ ಮಾಡುವ ಮೂಲಕ ಶೌಚಾಲಯದ ಸ್ವಚ್ಛತೆಯ ಬಗ್ಗೆ ನಾವು ಸಂಬಂಧಪಟ್ಟವರಿಗೆ ತಿಳಿಸಬಹುದಾಗಿದೆ.
ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಶನ್ ನಾಗರಿಕರಿಗೆ ಶೌಚಾಲಯದ ಸ್ವಚ್ಛತೆಯ ಬಗ್ಗೆ ವೋಟಿಂಗ್ ಮಾಡುವಂತಹ ಅವಕಾಶವನ್ನು ಕಲ್ಪಿಸಿಕೊಟ್ಟಿದೆ.ಶೌಚಾಲಯದ ಸ್ಥಿತಿ ಕೆಟ್ಟದಾಗಿದ್ದರೆ ಕೆಂಪು ಬಟನ್, ಸಾಧಾರಣವಾಗಿದ್ದರೆ ಕೇಸರಿ ಬಟನ್, ಸ್ವಚ್ಛವಾಗಿದ್ದರೆ ಹಸಿರು ಬಟನ್ನನ್ನು ಒತ್ತಬೇಕು.
ಒಂದು ತಿಂಗಳ ಕಾಲ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ನಗರದ 50 ಸಾರ್ವಜನಿಕ ಶೌಚಾಲಯಗಳಲ್ಲಿ ಇದನ್ನು ಅಳವಡಿಸಲಾಗಿದೆ. ಯಶಸ್ವಿಯಾದರೆ 350 ಶೌಚಾಲಯಗಳಲ್ಲಿ ಇದನ್ನು ಅಳವಡಿಸಲು ನಿರ್ಧರಿಸಲಾಗಿದೆ.
945 ರೂಪಾಯಿ ಕೊಟ್ಟು ಈ ಒಂದು ಮೆಶಿನ್ನನ್ನು ಖರೀದಿ ಮಾಡಲಾಗಿದ್ದು, 3 ವರ್ಷಗಳ ಬಾಳಿಕೆ ಇದಕ್ಕಿದೆ. 3 ಬಟನ್ಗಳನ್ನು ಇದು ಒಳಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.