ನವದೆಹಲಿ: ಈ ಹಿಂದೆ ಯಾವುದೇ ವ್ಯಾಟ್, ಸರ್ವಿಸ್ ಟ್ಯಾಕ್ಸ್ ಅಥವಾ ಎಕ್ಸೈಸ್ ಡ್ಯೂಟಿಗೆ ನೋಂದಣಿಗೊಳ್ಳದೇ ಇದ್ದ 1.6 ಲಕ್ಷ ವ್ಯವಹಾರಗಳು ಕಳೆದ ನಾಲ್ಕು ದಿನಗಳಿಂದ ಜಿಎಸ್ಟಿಗೆ ನೋಂದಾವಣಿಗೊಂಡಿದೆ.
ಜೂನ್ ೨೫ರಂದು ನೋಂದಾವಣಿಗೊಳ್ಳುವವರಿಗಾಗಿ ಜಿಎಸ್ಟಿ ನೆಟ್ವರ್ಕ್ ಪೋರ್ಟಲ್ನ್ನು ಮರು ತೆರೆಯಲಾಗಿತ್ತು, ಈ ವೇಳೆ ಹಲವಾರು ವ್ಯವಹಾರ ಸಂಸ್ಥೆಗಳು ನೋಂದಾವಣಿಗೆ ಮುಗಿ ಬಿದ್ದಿವೆ.
ಜೂನ್ 25ರಿಂದ 1.60 ಲಕ್ಷ ಹೊಸ ಅರ್ಜಿಗಳು ನೋಂದಾವಣಿಗಾಗಿ ಬಂದಿವೆ. ಇದರಲ್ಲಿ 53 ಸಾವಿರ ಅರ್ಜಿಗಳು ವ್ಯವಹಾರಗಳ ವಿವರಗಳಿಂದ ಪೂರ್ಣಗೊಂಡಿವೆ. ಉಳಿದವುಗಳು ಪ್ರಕ್ರಿಯೆಯಲ್ಲಿವೆ ಎಂದು ಜಿಎಸ್ಟಿಎನ್ ಮುಖ್ಯಸ್ಥ ನವೀನ್ ಕುಮಾರ್ ತಿಳಿಸಿದ್ದಾರೆ.
ಟ್ಯಾಕ್ಸ್, ಶುಗರ್, ಡೈಮಂಡ್ನಂತಹ ವ್ಯವಹಾರ ವಲಯಗಳು ಈ ಹಿಂದೆ ನೋಂದಾವಣಿಯಲ್ಲಿರಲಿಲ್ಲ, ಇದೀಗ ಅವುಗಳ ಜಿಎಸ್ಟಿಯಡಿ ನೋಂದಾವಣೆಗೊಳ್ಳುತ್ತಿವೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.