ನವದೆಹಲಿ: ಭಾರತ ಯುವ ಸ್ಕೇಟರ್ ನಿಶ್ಚಯ್ ಲೂತ್ರ 2018ರ ವಿಂಟರ್ ಒಲಿಂಪಿಕ್ಸ್ ಗೇಮ್ಸ್ನಲ್ಲಿ ಭಾಗವಹಿಸಲು ಸಿದ್ಧತೆ ನಡೆಸುತ್ತಿದ್ದಾನೆ. ಈತನಿಗೆ ಟಾಪ್ ಕ್ರಿಕೆಟಿಗರಾದ ಕೆ.ಎಲ್.ರಾಹುಲ್, ರೋಹಿತ್ ಶರ್ಮಾ ಮತ್ತು ರಿಶಬ್ ಪಂಥ್ ಬೆಂಬಲ ನೀಡುತ್ತಿದ್ದಾರೆ.
ಕ್ರೀಡಾ ಪರಿಕರಗಳ ಕಂಪನಿ ಅಡಿಡಾಸ್ ನಿಶ್ಚಯ್ಗಾಗಿ ದೇಣಿಗೆ ಸಂಗ್ರಹಿಸಲು ‘ಫ್ಯಾನ್ಫೈರ್’ ಎಂಬ ಅಭಿಯಾನವನ್ನೇ ಆರಂಭಿಸಿದೆ.
ಕೆಎಲ್ ರಾಹುಲ್ ಈತನಿಗೆ ಬೆಂಬಲ ನೀಡಿ ತಮ್ಮ ಟ್ವಿಟರ್ ಪ್ರೊಫೈಲ್ನ ಡಿಸ್ಪ್ಲೆ ಹೆಸರನ್ನೇ ಬದಲಾಯಿಸಿಕೊಂಡಿದ್ದಾರೆ. ಉನ್ಮುಕ್ತ್ ಚಾಂದ್, ರೋಹಿತ್ ಮತ್ತು ಪಂತ್ ನಿಶ್ಚಯ್ ಬೆಂಬಲಕ್ಕೆ ನಿಂತಿದ್ದಾರೆ.
18 ವರ್ಷದ ನಿಶ್ಚಯ್ ಈಗಾಗಲೇ 12 ನ್ಯಾಷನಲ್ ಚಾಂಪಿಯನ್ ಶಿಪ್ ಪದಕಗಳನ್ನು ಗೆದ್ದುಕೊಂಡಿದ್ದಾರೆ. ಇದರಲ್ಲಿ ೯ ಬಂಗಾರ ಮತ್ತು ೩ ಬೆಳ್ಳಿ ಸೇರಿಕೊಂಡಿದೆ. ಬಂಗಾರ ಮತ್ತು ಕಂಚನ್ನು ಅಂತಾರಾಷ್ಟ್ರೀಯ ಮಟ್ಟದಲ್ಲೂ ಗೆದ್ದುಕೊಂಡಿದ್ದಾರೆ.
ಯುಎಸ್ಎನಲ್ಲಿ ತರಬೇತಿ ಪಡೆಯುತ್ತಿದ್ದ ಈತ ಹಣಕಾಸಿನ ತೊಂದರೆಯಿಂದಾಗಿ ತರಬೇತಿಯನ್ನು ಅರ್ಧಕ್ಕೆ ನಿಲ್ಲಿಸಿ ಭಾರತಕ್ಕೆ ವಾಪಾಸ್ಸಾಗಿದ್ದಾನೆ. ವಿಂಟರ್ ಒಲಿಂಪಿಕ್ಸ್ನಲ್ಲಿ ಭಾಗವಹಿಸುವ ಮಹದಾಸೆ ಹೊತ್ತಿರುವ ಈತನಿಗೆ ತರಬೇತಿ ಪಡೆಯಲು ದೇಣಿಗೆ ಸಂಗ್ರಹಿಸಲು ಕ್ರಿಕೆಟಿಗರು ಮುಂದಾಗುತ್ತಿರುವುದು ಶ್ಲಾಘನೀಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.