ನವದೆಹಲಿ: ತನ್ನ ನೆಲಕ್ಕೆ ಐತಿಹಾಸಿಕ ಭೇಟಿ ಕೊಡಲಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ರತ್ನಕಂಬಳಿ ಸ್ವಾಗತ ನೀಡಲು ಇಸ್ರೇಲ್ ಸಜ್ಜಾಗಿದೆ. ಜುಲೈ 4-6ರವರೆಗೆ ಮೋದಿ ಇಸ್ರೇಲ್ ಪ್ರವಾಸಕೈಗೊಳ್ಳಲಿದ್ದಾರೆ.
ಮೋದಿ ಭೇಟಿಗೆ ಇಸ್ರೇಲ್ ಸರ್ಕಾರ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದು, ಎರಡೂವರೆ ದಿನಗಳ ಕಾಲದ ಭೇಟಿಯ ವೇಳೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಮೋದಿಯೊಂದಿಗೆಯೇ ಇರಲಿದ್ದಾರೆ.
1992ರಲ್ಲಿ ಭಾರತ ಮತ್ತು ಇಸ್ರೇಲ್ ರಾಜತಾಂತ್ರಿಕ ಸಂಬಂಧಕ್ಕೆ ಒಳಪಟ್ಟಿದ್ದು, ಅಲ್ಲಿಂದ ಉಭಯ ದೇಶಗಳು ಆತ್ಮೀಯ ಭದ್ರತಾ ಸಂಬಂಧವನ್ನು ಹೊಂದಿವೆ. 2015-16ರಲ್ಲಿ ಇಸ್ರೇಲ್ ಭಾರತಕ್ಕೆ ಅತೀ ಹೆಚ್ಚು ರಕ್ಷಣಾ ಪರಿಕರ ಪೂರೈಸಿದ ದೇಶವಾಗಿ ಹೊರಹೊಮ್ಮಿದೆ.
ಇದೀಗ ಮೋದಿ ಭೇಟಿಯ ವೇಳೆ ಜಲ ತಂತ್ರಜ್ಞಾನ ಸೇರಿದಂತೆ ರಕ್ಷಣೇತರ ವಿಷಯಗಳು ಚರ್ಚಿತವಾಗಲಿದೆ. ಇಸ್ರೇಲ್ ಸಮುದ್ರ ನೀರನ್ನು ಶುದ್ಧೀಕರಣಗೊಳಿಸಿ ಕೃಷಿಗೆ ಬಳಕೆ ಮಾಡುತ್ತದೆ ಮತ್ತು ಅದು ಶೇ.80ರಷ್ಟು ನೀರನ್ನು ಮರುಬಳಕೆ ಮಾಡುತ್ತದೆ.
ಉಳಿದ ಆರೋಗ್ಯ, ಕೃಷಿ, ಬಂಡವಾಳ ಹೂಡಿಕೆ ಮಾತ್ರಬವಲ್ಲದೇ ಬಾಲಿವುಡ್ನ್ನು ಇಸ್ರೇಲ್ಗೆ ಕೊಂಡೊಯ್ಯುವ ಬಗ್ಗೆಯೂ ಮಾತುಕತೆ ನಡೆಯಲಿದೆ.
ಮೋದಿ ಇಸ್ರೇಲ್ಗೆ ಆಗಮಿಸುತ್ತಿದ್ದಂತೆ ಸುಮಾರು 40-50 ಮಂದಿ ಇಸ್ರೇಲ್ ಗಣ್ಯರು ಅವರನ್ನು ಬರಮಾಡಿಕೊಳ್ಳಲಿದ್ದಾರೆ. ಇಂತಹ ಅದ್ದೂರಿ ಆಹ್ವಾನ ಪೋಪ್ ಮತ್ತು ಅಮೆರಿಕ ಅಧ್ಯಕ್ಷರಿಗೆ ಮಾತ್ರ ಸಿಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.