ಹಗ್ಯೂ: ಡಚ್ ಪಾಸ್ಪೋರ್ಟ್ ಹೊಂದಿರುವವರಿಗೆ 5 ವರ್ಷಗಳ ಬ್ಯುಸಿನೆಸ್ ಮತ್ತು ಟೂರಿಸ್ಟ್ ವೀಸಾ ನೀಡುವ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ನೆದರ್ಲ್ಯಾಂಡ್ಗೆ ಒಂದು ದಿನಗಳ ಪ್ರವಾಸಕೈಗೊಂಡ ಅವರು, ಅಲ್ಲಿ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದರು. ಯುಕೆ ಬಳಿಕ ಇಲ್ಲಿ ಅತೀ ಹೆಚ್ಚಿನ ಸಂಖ್ಯೆಯ ಭಾರತೀಯ ಸಮುದಾಯದವರು ನೆಲೆಸಿದ್ದಾರೆ.
ಭಾರತದ ಆಧುನಿಕತೆ ಮತ್ತು ಪ್ರಗತಿಗಾಗಿ ತಮ್ಮ ಸರ್ಕಾರ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದ ಅವರು, ನನ್ನ ಆಡಳಿತ ಜನ ಭಾಗಿದಾರತ್ವವನ್ನು ಬಯಸುತ್ತದೆ ಎಂದರು.
ಭಾರತದ ವೈವಿಧ್ಯತೆಯೇ ಅದರ ವಿಶೇಷತೆ ಎಂದು ಪ್ರತಿಪಾದಿಸಿದರು.
ನೆದರ್ಲ್ಯಾಂಡ್ಗೆ ಭೇಟಿಕೊಡುವ ಮೂಲಕ ಮೋದಿಯವರ ಮೂರು ರಾಷ್ಟ್ರಗಳ ಪ್ರವಾಸ ಅಂತ್ಯವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.