ನವದೆಹಲಿ: ಪಾಕಿಸ್ಥಾನಕ್ಕೆ ಪಾಠ ಕಲಿಸಲು ಸರ್ಜಿಕಲ್ ಸ್ಟ್ರೈಕ್ಗಿಂತಲೂ ಉತ್ತಮವಾದ ಆಯ್ಕೆ ಭಾರತದ ಬಳಿ ಇದೆ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.
‘ತಮಗೆ ಲಾಭ ತಂದು ಕೊಡುವ ಸರಳವಾದ ಯುದ್ಧದಲ್ಲಿ ಹೋರಾಡುತ್ತಿದ್ದೇವೆ ಎಂದು ಪಾಕಿಸ್ಥಾನ ಭಾವಿಸಿದೆ, ಆದರೆ ನಮ್ಮ ಬಳಿ ಹೆಚ್ಚು ಪ್ರಭಾವಶಾಲಿ ಮತ್ತು ಪರಿಣಾಮಕಾರಿಯಾದ ಆಯ್ಕೆಗಳು ಇವೆ. ನಮ್ಮ ಸೇನೆ ಅನಾಗರಿಕವಲ್ಲ. ನಾನು ತಲೆಗಳನ್ನು ಬಯಸುವುದಿಲ್ಲ ಯಾಕೆಂದರೆ ನಾವು ಶಿಸ್ತುಬದ್ಧ ಪಡೆಗಳು’ ಎನ್ನುವ ಮೂಲಕ ಭಾರತೀಯ ಸೈನಿಕ ತಲೆ ಕಡಿದು ಪೈಶಾಚಿಕ ವರ್ತನೆ ತೋರಿರುವ ಪಾಕಿಸ್ಥಾನಕ್ಕೆ ಜನರಲ್ ಬಿಪಿನ್ ಟಾಂಗ್ ನೀಡಿದ್ದಾರೆ.
ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ನನ್ನು ಅಮೆರಿಕ ಜಾಗತಿಕ ಉಗ್ರ ಎಂದು ಘೋಷಣೆ ಮಾಡಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ‘ಪಾಕಿಸ್ಥಾನ ಆತನ ವಿರುದ್ಧ ಕ್ರಮಕೈಗೊಳ್ಳುತ್ತದ ಎಂದು ಕಾದು ನೋಡುತ್ತೇನೆ. ಮುಖ್ಯಸ್ಥ ಸ್ಥಾನಕ್ಕೆ ಏರಿದ ದಿನದಿಂದ ಆತನ ಪ್ರತಿಭಟನೆಗಳ ಕ್ಯಾಲೆಂಡರ್ ಬಿಡುಗಡೆಗೊಳಿಸುತ್ತಿದ್ದಾನೆ’ ಎಂದಿದ್ದಾರೆ.
ಕಾಶ್ಮೀರದ ಪ್ರತ್ಯೇಕತಾವಾದಿಗಳೊಂದಿಗೆ ಮಾತುಕತೆ ನಡೆಸುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ‘ಶಾಂತಿಯಿದ್ದಾಗ ಮಾತ್ರ ಮಾತುಕತೆಗಳು ನಡೆಯುತ್ತವೆ. ಸೇನೆಗೆ ಮಾಡಲು ಕೆಲಸವಿದೆ. ಶಾಂತಿಯ ಮರುಸ್ಥಾಪನೆಯ ಜವಾಬ್ದಾರಿಯಿದೆ. ನನ್ನ ಸೇನೆಯ ಬೆಂಗಾವಲಿನ ಮೇಲೆ ದಾಳಿಗಳು ನಡೆಯುವುದಿಲ್ಲ ಎಂಬ ಭರವಸೆ ಸಿಕ್ಕಾಗ ಮಾತ್ರ ನಾನು ಮಾತುಕತೆಗೆ ಸಿದ್ಧನಾಗಬಲ್ಲೆ’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.