ವಾಷಿಂಗ್ಟನ್ : ಭಯೋತ್ಪಾದನೆಯನ್ನು ಕೊನೆಗೊಳಿಸುವಂತೆ ಪಾಕಿಸ್ಥಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕರೆ ನೀಡಿದ್ದಾರೆ.
ಜೈಶ್-ಇ-ಮೊಹಮ್ಮದ್, ಲಷ್ಕರ್-ಇ-ತೊಯ್ಬಾ ಮತ್ತು ಡಿ-ಕಂಪೆನಿ ವಿರುದ್ಧ ಸಹಕಾರ ನೀಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ವೈಟ್ ಹೌಸ್ನಲ್ಲಿ ಮಾತುಕತೆ ನಡೆಸಿರುವ ಉಭಯ ನಾಯಕರು ಭಯೋತ್ಪಾದನೆಯನ್ನು ಉತ್ತೇಜಿಸುತ್ತಿರುವ ಪಾಕಿಸ್ಥಾನ ಇದನ್ನು ನಿಲ್ಲಿಸಬೇಕು. ತನ್ನ ನೆಲದಿಂದ ಭಯೋತ್ಪಾದಕರನ್ನು ಉತ್ತೇಜಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಪಾಕಿಸ್ಥಾನಕ್ಕೆ ಸ್ಪಷ್ಟ ಸಂದೇಶ ರವಾನೆ ಮಾಡಿದ್ದಾರೆ.
ನರೇಂದ್ರ ಮೋದಿ ಮತ್ತು ಟ್ರಂಪ್ ಭೇಟಿಗೂ ಮುನ್ನ ಅಮೇರಿಕಾ ಸರ್ಕಾರ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಮುಖ್ಯಸ್ಥ ಸೈಯ್ಯದ್ ಸಲಾವುದ್ದೀನ್ನನ್ನು ಜಾಗತಿಕ ಉಗ್ರ ಎಂದು ಘೋಷಿಸುವುದರ ಮೂಲಕ ಪಾಕಿಸ್ಥಾನಕ್ಕೆ ಕಪಾಳ ಮೋಕ್ಷ ನೀಡಿದಂತಾಗಿತ್ತು.
ಉಭಯ ನಾಯಕರ ಜಂಟಿ ಹೇಳಿಕೆ ಬಿಡುಗಡೆ ಮಾಡಿದ ವೈಟ್ ಹೌಸ್ , 26/11 ಮುಂಬೈ ದಾಳಿ, ಪಠಾಣ್ಕೋಟ್ ದಾಳಿ, ಗಡಿಯಲ್ಲಿನ ಭಯೋತ್ಪಾದನೆಗಳು ಪಾಕಿಸ್ಥಾನ ಪ್ರಾಯೋಜಿತ ಉಗ್ರರಿಂದಲೇ ನಡೆದಿದ್ದು, ಇವಕ್ಕೆ ನ್ಯಾಯ ಒದಗಿಸಬೇಕಾಗಿದೆ. ಮತ್ತೊಂದು ವಿಷಯವೆಂದರೆ ಪಾಕಿಸ್ಥಾನದ ಮಿಲಿಟರಿ, ಈ ಕುರಿತು ಪಾಕಿಸ್ಥಾನದೊಂದಿಗೆ ಈಗಾಗಲೇ ವ್ಯಾಪಕವಾಗಿ ಚರ್ಚಿಸಲಾಗಿದೆ. ಬಹಳಷ್ಟು ದೇಶಗಳು ಭಯೋತ್ಪಾದನೆಯ ಹುಟ್ಟು ಪಾಕಿಸ್ಥಾನದಿಂದಲೇ ಆಗುತ್ತಿದೆ ಎಂದು ಹೇಳುತ್ತಿದ್ದಾರೆ. ಇದೀಗ ಈ ಸಮಸ್ಯೆಯನ್ನು ಬಗೆಹರಿಸಲು ಸೂಕ್ತ ಸಮಯ.
ಉಭಯ ದೇಶಗಳು ಭಯೋತ್ಪಾದನೆಯಿಂದ ಸಾಕಷ್ಟು ಅಪಾಯ ಎದುರಿಸಿದೆ. ಪ್ರಮುಖವಾಗಿ ಇಸ್ಲಾಮಿಕ್ ಭಯೋತ್ಪಾದನೆಯಿಂದ. ಹೀಗಾಗಿ ಭಯೋತ್ಪಾದನೆಯ ವಿರುದ್ಧ ಹೋರಾಡುವುದೇ ಪ್ರಮುಖ ಉದ್ದೇಶ. ಈ ನಿಟ್ಟಿನಲ್ಲಿ ಭಯೋತ್ಪಾದಕರ ಅಡಗುತಾಣಗಳನ್ನು ನಿರ್ನಾಮ ಮಾಡುವುದು ಕೂಡಾ ಅಮೇರಿಕಾ ಭಾರತದ ಸಹಕಾರದ ಉದ್ದೇಶಗಳಲ್ಲಿ ಪ್ರಮುಖವಾದದ್ದಾಗಿದೆ ಎಂದಿದ್ದಾರೆ.
ಭಯೋತ್ಪಾದನೆ ಜಾಗತಿಕ ಪಿಡುಗು. ಈಗಲಾದರೂ ಪಾಕಿಸ್ಥಾನ ಭಯೋತ್ಪಾದನೆಯನ್ನು ಕೊನೆಗೊಳಿಸಬೇಕು ಎಂದು ಟ್ರಂಪ್ ಮತ್ತು ಮೋದಿ ಪಾಕಿಸ್ಥಾನಕ್ಕೆ ಕರೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.