ನವದೆಹಲಿ : 150 ವರ್ಷಗಳ ಸಾಂಪ್ರದಾಯಿಕ ಹಣಕಾಸು ವರ್ಷದ ಸ್ವರೂಪವನ್ನು ಬದಲಾಯಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
2018 ರಿಂದಲೇ ದೇಶದ ಹಣಕಾಸು ವರ್ಷ ಬದಲಾವಣೆ ನಡೆಯಲಿದೆ ಎನ್ನಲಾಗಿದ್ದು, ಹಣಕಾಸು ವರ್ಷವು ಏಪ್ರಿಲ್ ಬದಲಾಗಿ ಜನವರಿಯಿಂದ ಪ್ರಾರಂಭವಾಗಲಿದ್ದು ಇದು ದೇಶದಲ್ಲಿ ಹೊಸ ಇತಿಹಾಸವನ್ನು ನಿರ್ಮಿಸಲಿದೆ.
ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಈ ಬದಲಾವಣೆ ಪ್ರಕ್ರಿಯೆ ಆರಂಭವಾಗಲಿದೆ. 150 ವರ್ಷಗಳಿಂದಲೂ ಹಣಕಾಸು ವರ್ಷವನ್ನು ಏಪ್ರಿಲ್ನಿಂದ ಮಾರ್ಚ್ವರೆಗೆ ಪಾಲಿಸಲಾಗುತ್ತಿತ್ತು. ಆದರೆ ಇದೀಗ ಇಂತಹ ಸಂಪ್ರದಾಯಕ್ಕೆ ಕೇಂದ್ರ ಸರ್ಕಾರವು ತಿಲಾಂಜಲಿ ಇಡುವ ಮೂಲಕ ಬದಲಾವಣೆಗೆ ಮುನ್ನುಡಿ ಬರೆಯಲಿದೆ. ಇದರ ಪ್ರಕಾರ 2018 ರಿಂದ ಹಣಕಾಸು ವರ್ಷವು ಜನವರಿಯಿಂದ ಪ್ರಾರಂಭವಾಗಿ ಡಿಸೆಂಬರ್ವರೆಗೆ ಆಗಲಿದೆ. ಅದರಂತೆ ಬಜೆಟ್ ಮಂಡನೆಯು ನವೆಂಬರ್ ತಿಂಗಳಿನಲ್ಲಿ ಆಗುವ ಸಾಧ್ಯತೆಯಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
150 ವರ್ಷದ ಹಳೆಯ ಪದ್ಧತಿಯ ಹಣಕಾಸು ವರ್ಷ ಏಪ್ರಿಲ್ 1 ರಿಂದ ಮಾರ್ಚ್ 31 ರ ವರೆಗೆ ಎಂದು ಜಾರಿಗೆ ಬಂದಿದ್ದು 1867 ರಲ್ಲಿ. ಬ್ರಿಟೀಷರ ಕಾಲದ ಈ ಪದ್ಧತಿಯು ಇದೀಗ ಬದಲಾವಣೆಯಾಗುವತ್ತ ಮುನ್ನುಡಿ ಬರೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.