ವಾಷಿಂಗ್ಟನ್ : ಅಮೇರಿಕಾ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಮತ್ತು ಮೊದಲ ಮಹಿಳೆ ಮೆಲಾನಿಯಾ ಟ್ರಂಪ್ ಅವರನ್ನು ವೈಟ್ಹೌಸ್ನಲ್ಲಿ ಸೋಮವಾರ ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಲವಾರು ಬಗೆಯ ಉಡುಗೊರೆಗಳನ್ನು ನೀಡಿದ್ದಾರೆ.
ಉಭಯ ನಾಯಕರುಗಳು ಪರಸ್ಪರ ಕೈ ಕುಲುಕುವುದು ಮತ್ತು ಅಪ್ಪುಗೆಯ ಮೂಲಕ ಪರಸ್ಪರರನ್ನು ಪ್ರೀತಿ ಪೂರ್ವಕವಾಗಿ ಭೇಟಿಯಾಗಿದ್ದಾರೆ. ಮಾತ್ರವಲ್ಲದೆ ಪರಸ್ಪರ ಉಡುಗೊರೆಗಳನ್ನೂ ಹಂಚಿಕೊಂಡಿದ್ದಾರೆ.
ಮೋದಿಯವರು ಟ್ರಂಪ್ ಅವರಿಗೆ ಜಮ್ಮು ಕಾಶ್ಮೀರದ ಶಾಲು, 52 ವರ್ಷಗಳ ಹಿಂದೆ ಅಬ್ರಹಾಂ ಲಿಂಕನ್ ಅವರ ಸ್ಮೃತಿ ದಿವಸದ ಶತಮಾನೋತ್ಸವ 1965 ರಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಿದ ಒರಿಜಿನಲ್ ಸ್ಟ್ಯಾಂಪ್ ಇರುವ ಪೊಲಿಯೋ, ಮರದ ಫ್ರೇಮ್ ಒಳಗೊಂಡ ಪಂಜಾಬಿನ ಹೋಷಿಯಾರ್ಪುರದ ಸುಂದರ ಕೆತ್ತನೆಗಳಿರುವ ಫ್ರೇಮ್ನ್ನು ನೀಡಿದರು.
Both President Lincoln and Mahatma Gandhi led from the front, with indomitable courage against the forces of reaction and outmoded beliefs. pic.twitter.com/XaPZTdangT
— PMO India (@PMOIndia) June 26, 2017
ಅಮೇರಿಕಾದ ಮೊದಲ ಮಹಿಳೆ ಮೆಲಾನಿಯಾ ಟ್ರಂಪ್ ಅವರಿಗೆ ಪ್ರಧಾನಿ ಮೋದಿಯವರು ಕರಕುಶಲ ಮತ್ತು ಸಾಂಪ್ರದಾಯಿಕ ಕೆತ್ತನೆಗಳನ್ನು ಮಾಡಿರುವ ಹಿಮಾಚಲ ಸಿಲ್ವರ್ ಬ್ರೇಸ್ಲೆಟ್, ಕಂಗ್ರಾ ಕಣಿವೆಯ ಟೀ ಮತ್ತು ಜೇನುತುಪ್ಪ, ಕೈಯಿಂದ ನೇಯ್ದ ಜಮ್ಮು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದ ಶಾಲು ಇವುಗಳನ್ನು ಉಡುಗೊರೆಯಾಗಿ ನೀಡಿದರು.
ಟ್ರಂಪ್ ಅವರು ಮೋದಿಯವರಿಗೆ ವೈಟ್ ಹೌಸ್ನ ಅಧ್ಯಕ್ಷರ ನಿವಾಸವನ್ನು ತೋರಿಸಿದರು. ಜೊತೆಗೆ ಅಬ್ರಹಾಂ ಲಿಂಕನ್ ಅವರು ಮಲಗಿದ್ದ ಕೋಣೆ, ಅವರು ಬರೆಯುತ್ತಿದ್ದ ಮೇಜು ಇವುಗಳನ್ನು ಮೋದಿಯವರಿಗೆ ತೋರಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.