ಕಾಶ್ಮೀರ : ಕಳೆದ ಕೆಲವು ತಿಂಗಳುಗಳಿಂದ ಕಾಶ್ಮೀರದ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಕೆಲವೇ ಕೆಲವು ದುಷ್ಕರ್ಮಿಗಳಿಂದಾಗಿ ಸಾವಿರಾರು ಸಂಖ್ಯೆಯ ನಾಗರೀಕರು ಅಲ್ಲಿ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ.
ಭಾರತೀಯ ಸೇನೆಯು ಅಲ್ಲಿನ ಮೂಲಭೂತವಾದಿಗಳಿಂದ, ಉಗ್ರರಿಂದ ರಾಜ್ಯವನ್ನು ರಕ್ಷಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದೆ.
ಕೇವಲ ಹೋರಾಟ ಮಾಡುವುದು ಮಾತ್ರವಲ್ಲದೆ, ಅಗತ್ಯವಿರುವವರಿಗೆ ವೈದ್ಯಕೀಯ ನೆರವುಗಳನ್ನೂ ಸೇನೆ ನೀಡುತ್ತಿದೆ. ಅಲ್ಲಿನ ಮಕ್ಕಳು ಸರಿಯಾದ ಶೈಕ್ಷಣಿಕ ಮಾರ್ಗವನ್ನು ಆಯ್ಕೆ ಮಾಡಲು ಸಹಾಯ ಮಾಡುತ್ತಿದೆ.
ಇದೀಗ ಈದ್ ಹಬ್ಬದ ಪ್ರಯುಕ್ತ ಸೇನೆಯು ಕಾಶ್ಮೀರದ ಅನಾಥಾಶ್ರಮದಲ್ಲಿನ ಮಕ್ಕಳ ಬದುಕನ್ನು ಉತ್ತಮ ಪಡಿಸುವ ಕಾರ್ಯ ಮಾಡಿದೆ. ಇಲ್ಲಿನ ಅಲ್ ಮುಝಮ್ಮಿಲ್ ವೆಲ್ಫೇರ್ ಟ್ರಸ್ಟ್ & ಅನಾಥಾಶ್ರಮಕ್ಕೆ ರಾಷ್ಟ್ರೀಯ ರೈಫಲ್ಸ್ ಉಡುಗೊರೆ ಮತ್ತು ಸಿಹಿ ತಿಂಡಿಗಳನ್ನು ಹಂಚಿದೆ.
ಇದೊಂದೇ ಅಲ್ಲದೆ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಕಣಿವೆ ರಾಜ್ಯದ ಮಕ್ಕಳ, ನಾಗರೀಕರ ಬದುಕು ಉತ್ತಮಗೊಳ್ಳುವಂತೆ ಸೇನೆ ಮಾಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.