ಕಾಸರಗೋಡು: ಎಲ್ಲೋ ದೂರದ ಇರಾಕ್, ಇರಾನ್ನಲ್ಲಿ ಇಸಿಸ್ ಉಗ್ರರು ನಡೆಸುತ್ತಿರುವ ಪೈಶಾಚಿಕ ಕೃತ್ಯದ ಬಗ್ಗೆ ನಾವು ಮಾತನಾಡುತ್ತೇವೆ. ಆದರೆ ನಮ್ಮ ಪಕ್ಕದ ಕೇರಳ ರಾಜ್ಯದ ಕಾಸರಗೋಡಿನಲ್ಲಿ ಇಸಿಸ್ನವರು ಮಾಡುತ್ತಿರುವ ಕೃತ್ಯಗಳು ನಮ್ಮ ಅರಿವಿಗೆ ಬರುತ್ತಿಲ್ಲ.
ಕಾಸರಗೋಡಿನಲ್ಲಿ ಇಸಿಸ್ ಉಗ್ರರ ಒಂದು ನೆಲೆಯೇ ಇದ್ದು ಇದಕ್ಕೆ ’ಗಾಝಾ’ ಎಂದು ಹೆಸರಿಡಲಾಗಿದೆ. ಇಲ್ಲಿ ಎಗ್ಗಿಲ್ಲದ ‘ಮತಾಂತರ ಕೇಂದ್ರ’ಗಳು ಕಾರ್ಯಾಚರಣೆ ಮಾಡುತ್ತಿವೆ. ಇಲ್ಲಿ ಹಿಂದೂಗಳ ತಲೆಗೆಡಿಸಿ ಅವರನ್ನು ಮತಾಂತರ ಮಾಡಿ ಬಳಿಕ ಅವರನ್ನು ಉಗ್ರ ಕೃತ್ಯಗಳಿಗೆ ಬಳಕೆ ಮಾಡಲಾಗುತ್ತಿದೆ.
ಕಲಿಫತ್ಗೆ ಬದ್ಧರಾದ ಏಜೆಂಟ್ಗಳು ಇಲ್ಲಿ ಟ್ಯೂಷನ್ ಕ್ಲಾಸ್ಗಳನ್ನು ನಡೆಸುತ್ತಿದ್ದು, ಮತಾಂತರ ಮಾಡುವವರಿಗೆ ಧರ್ಮ ಮತ್ತು ನಂಬಿಕೆಗೆ ಸಂಬಂಧಿಸಿದಂತೆ ದರಗಳ ಪಟ್ಟಿಯನ್ನು ಇಲ್ಲಿ ಹಂಚಿಕೆ ಮಾಡಲಾಗುತ್ತಿದೆ.
ಪಂಜಾಬಿ ಸಿಖ್ ಯುವತಿಗೆ 7 ಲಕ್ಷ, ಪಂಜಾಬಿ ಹಿಂದೂ ಯುವತಿಗೆ 6 ಲಕ್ಷ, ಬ್ರಾಹ್ಮಣ ಯುವತಿಗೆ 5 ಲಕ್ಷ, ಕ್ಷತ್ರಿಯ ಯುವತಿಗೆ 4.5 ಲಕ್ಷ, ಕ್ರೈಸ್ಥ ಯುವತಿಗೆ 4 ಲಕ್ಷ, ಎಸ್ಟಿ-ಎಸ್ಸಿಗೆ 2 ಲಕ್ಷ ದರಗಳನ್ನು ಇಲ್ಲಿ ನಿಗದಿಪಡಿಸಲಾಗಿದೆ.
ಮೊದಲು ಯುವತಿಯರನ್ನು ಸೆಳೆಯುವುದು, ಬಳಿಕ ಅವರೊಂದಿಗೆ ಫೋಟೋ ತೆಗೆಸಿಕೊಳ್ಳುವುದು, ಫೋಟೋ ಮುಂದಿಟ್ಟು ಮದುವೆಗೆ ಒತ್ತಾಯಿಸುವುದು, ಮದುವೆಯಾದ ಬಳಿಕ ಮತಾಂತರ ಮಾಡುವುದು. ಬಳಿಕ ನಿಗದಿತ ದರವನ್ನು ಪಡೆಯುವುದು ಇವರ ಯೋಜನೆಯಾಗಿದೆ.
ಇವರ ಈ ವ್ಯವಸ್ಥಿತ ಯೋಜನೆಗೆ ಈಗಾಗಲೇ 6 ಸಾವಿರ ಮಂದಿ ಬಲಿಯಾಗಿದ್ದಾರೆ ಎನ್ನಲಾಗಿದೆ.
ಈ ಗಾಝಾ ಪ್ರದೇಶದಲ್ಲಿ ಪೊಲೀಸರು ಕೂಡ ಓಡಾಡಲು ಭಯ ಪಡುವಂತಹ ವಾತಾವರಣವಿದೆ ಎಂದು ಸುದ್ದಿ ಬಹಿರಂಗಪಡಿಸಿದ ವಾಹಿನಿ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.