ನವದೆಹಲಿ: ಮಾನವರಹಿತ ರೈಲ್ವೇ ಕ್ರಾಸಿಂಗ್ಗಳಲ್ಲಿ ಅಪಘಾತ ತಡೆಯಲು ಉಪಗ್ರಹ ಆಧಾರಿತ ಚಿಪ್ ವ್ಯವಸ್ಥೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಅಭಿವೃದ್ಧಿ ಪಡಿಸಿದ್ದು, ಇದನ್ನು ಮಾನವ ರಹಿತ ಕ್ರಾಸಿಂಗ್ಗಳು ಇರುವಲ್ಲಿ ಅಳವಡಿಸಿ, ಕ್ರಾಸಿಂಗ್ಗಳಲ್ಲಿ ರೈಲು ತೆರಳುವ ವೇಳೆ ಸೈರನ್ ಶಬ್ದದ ಮೂಲಕ ರಸ್ತೆಗಳಲ್ಲಿ ಸಂಚರಿಸುವವರಿಗೆ ಎಚ್ಚರಿಕೆ ನೀಡುವ ಸ್ಮಾರ್ಟ್ ತಂತ್ರಜ್ಞಾನವನ್ನು ಇಸ್ರೋ ಅಭಿವೃದ್ಧಿಪಡಿಸಿದೆ.
ಮಾನವ ರಹಿತ ರೈಲ್ವೇ ಕ್ರಾಸಿಂಗ್ಗಳಲ್ಲಿ ಹಳಿ ದಾಟುವವರನ್ನು ಎಚ್ಚರಿಸಲು ಈ ವ್ಯವಸ್ಥೆಯನ್ನು ಇಸ್ರೋ ಅಭಿವೃದ್ಧಿ ಪಡಿಸಿದ್ದು, ಇದು ಒಂದು ಇಂಟಿಗ್ರೇಟೆಡ್ ಚಿಪ್ ಆಗಿದ್ದು ಇದನ್ನು ರೈಲಿನ ಎಂಜಿನ್ ಭಾಗದಲ್ಲಿ ಅಳವಡಿಸಲಾಗುತ್ತದೆ. ಈ ಚಿಪ್ ಮಾನವ ರಹಿತ ಕ್ರಾಸಿಂಗ್ನ 500 ಮೀಟರ್ ಮೊದಲೇ ಸೈರನ್ ಅನ್ನು ಕ್ರಿಯಾಶೀಲಗೊಳಿಸುತ್ತದೆ. ಇದರಿಂದ ಹಳಿ ದಾಟುವವರಿಗೆ ರೈಲು ಬರುತ್ತಿದೆ ಎಂಬುದು ಗೊತ್ತಾಗುತ್ತದೆ. ಕ್ರಾಸಿಂಗ್ ಸಮೀಸುತ್ತಿರುವಾಗ ಸೈರನ್ ಶಬ್ದ ಜೋರಾಗುತ್ತದೆ ಮತ್ತು ಕ್ರಾಸಿಂಗ್ ದಾಟಿದ ಬಳಿಕ ಈ ಶಬ್ದ ಕ್ರಮೇಣವಾಗಿ ಕಡಿಮೆಯಾಗುತ್ತದೆ.
ಸದ್ಯಕ್ಕೆ ಪ್ರಾಯೋಗಿಕವಾಗಿ ಮುಂಬೈ ಮತ್ತು ಗುವಾಹಟಿ ಕ್ಸ್ಪ್ರೆಸ್ನಲ್ಲಿ ಅಳವಡಿಸಲಾಗುತ್ತಿದೆ. ಬಳಿಕ ಉಳಿದ ರೈಲುಗಳಲ್ಲೂ ಅಳವಡಿಸಲಾಗುವುದು ಎನ್ನಲಾಗಿದೆ.
ಈ ವ್ಯವಸ್ಥೆಯೊಂದು ನಿಜಕ್ಕೂ ಉತ್ತಮ ನಡೆಯಾಗಿದ್ದು, ಇದರಿಂದ ಮಾನವರಹಿತ ರೈಲ್ವೇ ಕ್ರಾಸಿಂಗ್ಗಳಲ್ಲಿ ನಡೆಯುವ ಬಹಳಷ್ಟು ಅಪಘಾತಗಳನ್ನು ತಡೆಯಲು ಸಹಾಯಕವಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.