ನವದೆಹಲಿ: ದೇಶದ 116 ನಗರಗಳ ಜನರ ಬದುಕಿನ ಗುಣಮಟ್ಟ ಅರಿಯುವ ಸಲುವಾಗಿ ಕೇಂದ್ರ ಸರ್ಕಾರವು ‘ನಗರಗಳ ಜೀವನ ಗುಣಮಟ್ಟ ಸೂಚ್ಯಾಂಕ’ (ಸಿಟಿ ಲಿವೇಬಿಲಿಟಿ ಇಂಡೆಕ್ಸ್)ಗೆ ಚಾಲನೆ ನೀಡಿದೆ.
ದೇಶದ ರಾಜಧಾನಿ ಸೇರಿದಂತೆ 1 ಮಿಲಿಯನ್ಗಿಂತ ಅಧಿಕ ಜನಸಂಖ್ಯೆ ಇರುವ ನಗರಗಳನ್ನು ಇದಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ.
ನಗರ ಪರಿರ್ವತನೆಯ ವಿಚಾರ ಸಂಕಿರಣದಲ್ಲಿ ಇಂಡೆಕ್ಸ್ಗೆ ಚಾಲನೆ ನೀಡಿ ಮಾತನಾಡಿದ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು, ‘ನಗರಗಳ ಜೀವನ ಗುಣಮಟ್ಟವನ್ನು ಅಳೆಯುವ ಮತ್ತು ಅದಕ್ಕೆ ಅನುಗುಣವಾಗಿ ರ್ಯಾಂಕಿಂಗ್ ನೀಡುವ ಸಂದರ್ಭ ಬಂದಿದೆ’ ಎಂದರು.
ರಸ್ತೆಗಳ, ಶಿಕ್ಷಣ ಲಭ್ಯತೆ, ಉದ್ಯೋಗ ಅವಕಾಶ, ತುರ್ತು ಸ್ಪಂದನೆ, ಕುಂದುಕೊರತೆ ಆಲಿಕೆ, ಮಾಲಿನ್ಯ ಮುಂತಾದುವುಗಳನ್ನು ಗಮನದಲ್ಲಿಟ್ಟುಕೊಂಡು ಸ್ಥಾನವನ್ನು ನಗರಗಳಿಗೆ ನೀಡಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.