ಜೋಹನ್ಸ್ಬರ್ಗ್: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಕನಿಷ್ಠ ಆಹಾರ ಸೇವನೆ ಪದ್ಧತಿಯಿಂದ ಸ್ಫೂರ್ತಿಗೊಂಡು ದಕ್ಷಿಣ ಆಫ್ರಿಕಾದ ಜೋಹನ್ಸ್ಬರ್ಗ್ನ ಸತ್ಯಾಗ್ರಹ ಹೌಸ್ನಲ್ಲಿ ವಿನೂತನ ಟೀ ಮಿಶ್ರಣವೊಂದು ಆರಂಭಗೊಂಡಿದೆ.
ಈ ಟೀ ಶಾಪ್ಗೆ ‘ಸತ್ಯಾಗ್ರಹ ಹೌಸ್ ಟೀ’ ಎಂದು ಹೆಸರಿಡಲಾಗಿದ್ದು, ಸಂಪೂರ್ಣ ಸಾವಯವ ಕಾಫಿನ್ ಮುಕ್ತ ನೈಸರ್ಗಿಕ ಪದಾರ್ಥಗಳನ್ನು ಬಳಸಿದ ಟೀ ಮಿಶ್ರಣ ಇದಾಗಿದೆ.
19ನೇ ಶತಮಾನದಲ್ಲಿ ಮಹಾತ್ಮ ಗಾಂಧೀಜಿಯವರು ಜೀವಿಸಿದ್ದ ದಕ್ಷಿಣ ಆಫ್ರಿಕಾದ ನಿವಾಸವನ್ನು ಸತ್ಯಾಗ್ರಹ ಹವಸ್ ಆಗಿ ಅಭಿವೃದ್ಧಿಪಡಿಸಲಾಗಿದ್ದು, ಒಂದು ವಿಭಿನ್ನ ಮ್ಯೂಸಿಯಂ ಮತ್ತು ಗೆಸ್ಟ್ ಹೌಸ್ ಆಗಿ ಪರಿವರ್ತನೆಗೊಂಡಿದೆ.
ಈ ಸತ್ಯಾಗ್ರಹ ಹೌಸ್ ಆಫ್ರಿಕಾದ ದುಬಾರಿ ಬ್ರಾಂಡ್ ಯಸ್ವರದೊಂದಿಗೆ ಸೇರಿ ಈ ವಿಭಿನ್ನ ಟೀ ಬ್ಲೆಂಡ್ನ್ನು ಸಿದ್ಧಪಡಿಸಿದೆ. ದಾಲ್ಚಿನ್ನಿ, ಲಿಂಬೆ, ಲವಂಗ, ಶುಂಠಿ, ಏಲಕ್ಕಿ, ಜೇನು ತುಪ್ಪ ಮುಂತಾದುವುಗಳನ್ನು ಬಳಸಿ ಇದನ್ನು ಸಿದ್ಧಪಡಿಸಲಾಗಿದೆ.
ಗಾಂಧೀಜಿಯವರ ಸಂದೇಶಗಳನ್ನು ಗಮನದಲ್ಲಿಟ್ಟುಕೊಂಡು ಸಂಪೂರ್ಣ ನೈಸರ್ಗಿಕ ಟೀ ಬ್ಲೆಂಡ್ ತಯಾರಿಸಲಾಗಿದೆ ಎಂದು ಅದು ಹೇಳಿಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.