ಮುಂಬಯಿ: ಸಂಕಷ್ಟದಲ್ಲಿರುವ ರೈತರಿಗೆ ಆರ್ಥಿಕ ನೆರವು ನೀಡುವುದಕ್ಕಾಗಿ ಒಂದು ತಿಂಗಳ ವೇತನವನ್ನು ದಾನ ಮಾಡುವಂತೆ ಮಹಾರಾಷ್ಟ್ರ ಸರ್ಕಾರ ಸರ್ಕಾರಿ ಉದ್ಯೋಗಿಗಳನ್ನು ಮನವಿ ಮಾಡಿಕೊಂಡಿದೆ.
ಐಎಎಸ್, ಐಪಿಎಸ್, ಅರಣ್ಯಾಧಿಕಾರಿ, ರಾಜ್ಯ ಸರ್ಕಾರಿ ನೌಕರರಿಗೆ, ಅರೆ ಸರ್ಕಾರಿ ಮಂಡಳಿಗಳಿಗೆ, ಕಾರ್ಪೋರೇಶನ್ ಉದ್ಯೋಗಿಗಳಿಗೆ ಜುಲೈ ತಿಂಗಳ ವೇತನವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುವಂತೆ ಕೋರಿ ಸರ್ಕಾರಿ ಅಧಿಸೂಚನೆಯನ್ನು ಹೊರಡಿಸಿದೆ.
ಶಾಸಕರು, ಎಂಎಲ್ಸಿ, ಸಂಪುಟ ಸಹೋದ್ಯೋಗಿಗಳಿಗೂ ಈ ಮನವಿಯನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮಾಡಿದ್ದಾರೆ.
ರೈತರ ಆತ್ಮಹತ್ಯೆಗಳು ಹೆಚ್ಚಾಗಿ ನಡೆದಿರುವ ಪ್ರದೇಶಗಳಲ್ಲಿ ಸಂಕಷ್ಟದಲ್ಲಿರುವ ರೈತರಿಗೆ ಹಣಕಾಸು ನೆರವು ನೀಡುವ ಸಲುವಾಗಿ ಈ ಮನವಿಯನ್ನು ಮಾಡಲಾಗಿದೆ.
ರೈರರ ಮಕ್ಕಳ ಶಿಕ್ಷಣದಂತಹ ಕಾರ್ಯಗಳಿಗೆ ಈ ಹಣವನ್ನು ವಿನಿಯೋಗ ಮಾಡುವುದಾಗಿ ಸರ್ಕಾರ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.