ನವದೆಹಲಿ: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ತನ್ನ ಸಾಧನೆಯ ಹಾದಿಯಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಇಂದು ಬೆಳಿಗ್ಗೆ ಅದು 30 ನ್ಯಾನೋ ಸೆಟ್ಲೈಟ್ಗಳನ್ನೊಳಗೊಂಡ ಕಾರ್ಟೊಸ್ಯಾಟ್ನ್ನು ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಚಿಮ್ಮಿಸಿದೆ.
ಬೆಳಿಗ್ಗೆ 9.29ರ ಸುಮಾರಿಗೆ ಶ್ರೀಹರಿಕೋಟಾದಿಂದ ಪಿಎಸ್ಎಲ್ವಿ-ಸಿ38 ಮೂಲಕ ಇದನ್ನು ಉಡಾವಣೆಗೊಳಿಸಲಾಯಿತು.
ಕಾರ್ಟೊಸ್ಯಾಟ್-2 ಮತ್ತು ಇತರ 30 ಸೆಟ್ಲೈಟ್ಗಳು ಒಟ್ಟಾಗಿ 955ಕೆ.ಜಿ ತೋಕ ಇದ್ದವು.
ಇಸ್ರೋ ಈ ಸಾಧನೆಗೆ ದೇಶದ ಗಣ್ಯಾತೀಗಣ್ಯರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.